ಶ್ರೀನಗರ: ಬಾಲಿವುಡ್ ನಟ ಅಕ್ಷಯ್ ಕುಮಾರ್ 1ಕೋಟಿ ರೂ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಪೂಜೆಯನ್ನು ನೆರವೇರಿಸಲಾಗಿದೆ.
Advertisement
ಅಕ್ಷಯ್ ಈ ಹಿಂದೆ ಬಿಎಸ್‍ಎಫ್‍ಗೆ ಭೇಟಿ ನೀಡಿದ್ದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ದೇಶದ ಗಡಿ ಕಾಯುವ ನೈಜ ಹೀರೋಗಳನ್ನು ನಾನಿಂದು ಭೇಟಿಯಾದೆ. ಗೌರವದ ಹೊರತಾಗಿ ಮತ್ಯಾವ ಭಾವವೂ ನನ್ನಲ್ಲಿ ಮೂಡುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿಯೇ ಅವರು ಶಾಲೆಗೆ ದೇಣಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಬಿಎಸ್‍ಎಫ್ ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.
Advertisement
DG BSF Sh Rakesh Asthana along with Sh @akshaykumar Padma Shri laid foundation stone of Hari Om Bhatia Education Block at Govt Middle School Niru, Kashmir in presence of Smt Anu Asthana, President BWWA & Sh Surendra Panwar, SDG Western Command BSF through weblink today#JaiHind pic.twitter.com/7lO9VvQ7up
— BSF (@BSF_India) July 27, 2021
Advertisement
Advertisement
ಗಡಿ ಭದ್ರತಾ ಪಡೆಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯಂತೆ, ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಸ್ಮರಣಾರ್ಥವಾಗಿ, ಕಾಶ್ಮೀರದ ನೀರುವಿನ ಸರ್ಕಾರಿ ಶಾಲೆಯ ಹೊಸ ಸಂಕೀರ್ಣಕ್ಕೆ ಅಡಿಪಾಯವನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ವೆಬ್‍ಲಿಂಕ್ ಮೂಲಕ ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.
ಕೊರೊನಾ ಸಂದಿಗ್ಧ ಸಮಯದಲ್ಲಿ ಅವಶ್ಯವಿರುವವರಿಗೆ ಸಹಾಯ ಹಸ್ತ ಚಾಚಿದ್ದ ಈ ನಟ, ಈಗ ಶಿಕ್ಷಣ ಕ್ಷೇತ್ರದಲ್ಲೂ ನೆರವು ನೀಡಿದ್ದು ಗಮನ ಸೆಳೆದಿದೆ. ಅಕ್ಷಯ್ ಕುಮಾರ್ ಅವರು ಬಾಲಿವುಡ್‍ನಲ್ಲಿ ಮುಂಚೂಣಿಯಲ್ಲಿರುವ ನಟರಾಗಿದ್ದಾರೆ. ಬೆಲ್ ಬಾಟಂ, ಬಚ್ಚನ್ ಪಾಂಡೆ, ರಕ್ಷಾ ಬಂಧನ್, ರಾಮ ಸೇತು, ಪೃಥ್ವಿರಾಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.