– ನಾರಾಯಣಗೌಡ ವಿರುದ್ಧ ಹೆಚ್‍ಡಿಕೆ ಆರೋಪ
ಮಂಡ್ಯ: ಜಿಲ್ಲೆಯಲ್ಲಿ ಶೇಕಡ 87 ರಷ್ಟು ಅಕ್ರಮ ಗಣಿಗಾರಿಕೆಗಳು ಇವೆ. ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರೋದು ಮಂಡ್ಯ ಜಿಲ್ಲೆಯಲ್ಲಿ. ನಾರಾಯಣಗೌಡರು ಸಚಿವರಾದ ತಕ್ಷಣ ಅಕ್ರಮ ಗಣಿಗಾರಿಕೆಯನ್ನು ತಡೆಯುವ ಮೂಲಕ ಜಿಲ್ಲೆಯ ಸಂಪನ್ಮೂಲವನ್ನು ಉಳಿಸಬಹುದಿತ್ತು. ಆದರೆ ಇದೀಗ ಶಿವಮೊಗ್ಗದ ಘಟನೆಯ ಬಳಿಕ ಅವರು ಮಾತನಾಡುತ್ತಿದ್ದಾರೆ. ಮಂಡ್ಯದಲ್ಲಿ ಗಣಿಗಾರಿಕೆಗೆ ಎನ್‍ಓಸಿ ಕೊಡಲು 10 ಲಕ್ಷ ಫಿಕ್ಸ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆ 10 ಲಕ್ಷ ರೂಪಾಯಿ ದುಡ್ಡು ಎಲ್ಲಿ ಹೋಯಿತು ಎಂದು ಸತ್ಯ ಹೇಳಬೇಕು ಎಂದು ನಾರಾಯಣಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಇಂದು ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅಕ್ರಮ ಗಣಿಗಾರಿಕೆಯ ಕುರಿತು ಮಾತನಾಡಿದ ಅವರು. ನಾರಾಯಣಗೌಡ ಅವರು ಸಚಿವರಾಗಿ 14 ತಿಂಗಳುಗಳು ಆಗಿವೆ. ಆದರೆ ಇದೀಗ ಶಿವಮೊಗ್ಗದ ಘಟನೆಯ ನಂತರ ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಯನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇಷ್ಟು ದಿವಸ ಈ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
Advertisement
Advertisement
ಬೆಳಗಾವಿಯಲ್ಲಿ ಮರಾಠರ ಪುಡಾಂಟಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಗಡಸು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಮರಾಠರನ್ನು ಮೆಚ್ಚಿಸಿಕೊಳ್ಳಲು ಈ ಸರ್ಕಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.