– ಜಲಾಗ್ನಿ ಯುದ್ಧದಲ್ಲಿ ಗೆಲ್ಲೋರಾರು?
ಹೈದರಾಬಾದ್: ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಕಾಣಲಿದೆ. ರಾಮ್ ಚರಣ್, ಜೂನಿಯರ್ ಎನ್‍ಟಿಆರ್, ಅಜಯ್ ದೇವ್‍ಗನ್, ಆಲಿಯಾ ಭಟ್, ಸಾಮುತಿಕಾರಣಿ, ಓಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್‍ಸನ್ ಸೇರಿದಂತೆ ದೊಡ್ಡ ತಾರಾಗಣವನ್ನ ಚಿತ್ರತಂಡ ಹೊಂದಿದೆ.
ರಾಮಚರಣ್ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದು, ಜಲ ಮತ್ತು ಅಗ್ನಿ ಜೊತೆಯಾಗಿ ದೊಡ್ಡ ಫೋರ್ಸ್ ನೊಂದಿಗೆ ಆಗಮಿಸಲಿದೆ. 20121 ಅಕ್ಟೋಬರ್ 13ರಂದು ಹೊಸ ಅವತಾರ ನೋಡಿ ಎಂದು ಬರೆದುಕೊಂಡಿದ್ದಾರೆ.
2020 ಜುಲೈ 30ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧಗೊಂಡಿತ್ತು. ಕೊರೊನಾದಿಂದ ಚಿತ್ರೀಕರಣ ಸೇರಿದಂತೆ ಇಡೀ ಚಿತ್ರರಂಗ ಸ್ಥಗಿತಗೊಂಡಿತ್ತು. ಹಾಗಾಗಿ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. ಸದ್ಯ ಚಿತ್ರತಂಡ ಕ್ಲೈಮ್ಯಾಕ್ಸ್ ದೃಶ್ಯಗಳ ಶೂಟಿಂಗ್ ನಲ್ಲಿ ತೊಡಗಿಕೊಂಡಿದೆ.
Fire ???? and Water ???? will come together to make an unstoppable FORCE as you've never witnessed!
Get Ready to experience Indian Cinema in its finest avatar on October 13, 2021 ????????#RRRFestivalOnOct13th #RRR #RRRMovie pic.twitter.com/7vSMf0bI5n
— Ram Charan (@AlwaysRamCharan) January 25, 2021