ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.
Advertisement
ಏಳೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ವೆಂಟಿಲೇಟರ್ ಸಹಿತ ಅಂಬ್ಯುಲೆನ್ಸ್‌ನ್ನು ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ್ ಪೂಜಾರ್ ಸಮ್ಮುಖದಲ್ಲಿ ಅಂಬ್ಯುಲೆನ್ಸ್‍ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸುವದಕ್ಕೆ ನೀಡಿದ್ದಾರೆ.
Advertisement
Advertisement
ರಾಣೇಬೆನ್ನೂರು ತಾಲೂಕು ಪಂಚಾಯತಿಯ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಶಾಸಕ ಅರುಣ್‍ಕುಮಾರ್ ಪೂಜಾರ್‌ಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್‍ರು ಒದಗಿಸಿರುವ ಅಂಬ್ಯುಲೆನ್ಸ್‌ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸಕ್ಕೆ ಶಾಸಕ ಪೂಜಾರ್ ಮುಂದಾಗಿದ್ದಾರೆ.
Advertisement
ತಾಲೂಕಿನಲ್ಲಿ ಸೋಂಕಿತರಾಗೋ ಜನರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡುತ್ತದೆ.