ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸೋಂಕಿನ ನಿಯಂತ್ರಣಕ್ಕಾಗಿ ಅಂತರಾಷ್ಟ್ರೀಯ ವಿಮಾನಯಾನದ ನಿರ್ಬಂಧವನ್ನು ಮೇ 31ರ ವರೆಗೆ ವಿಸ್ತರಣೆ ಮಾಡಿರುವ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಆದೇಶ ಹೊರಡಿಸಿದೆ.
ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವ್ಯಾಕ್ಸಿನ್ ಮತ್ತು ಆಕ್ಸಿಜನ್ ಸಮಸ್ಯೆ ಕೂಡ ಕಂಡು ಬಂದಿದೆ. ಹಾಗಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟದ ನಿರ್ಬಂಧವನ್ನು ಮೇ 31ರ ವರೆಗೂ ವಿಸ್ತರಣೆ ಮಾಡಲಾಗಿದ್ದು, ಈಗಾಗಲೇ ನಿಗದಿಯಾಗಿರುವ ವಿಮಾನಯಾನಕ್ಕೆ ಅವಕಾಶ ಕೊಡಬಹುದು ಎಂದು ಡಿಜಿಸಿಎ ಪತ್ರದ ಮೂಲಕ ಸ್ಪಷ್ಟ ಪಡಿಸಿದೆ.
2020ರ ಜೂನ್ 26ರಂದು ಹೊರಡಿಸಿದ ಆದೇಶವನ್ನು 2021 ಮೇ 31ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇದರ ಪ್ರಕಾರ ಅಂತರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕ ವಿಮಾನ ಹಾರಾಟವನ್ನು ಭಾರತದಲ್ಲಿ ಮುಂದಿನ 2,359 ಗಂಟೆಗಳ ವರೆಗೆ ಅಂದರೆ 2021ರ ಮೇ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ನಿರ್ಬಂಧವು ಅಂತರಾಷ್ಟ್ರೀಯ ಕಾರ್ಗೊ ವಿಮಾನಗಳ ಕಾರ್ಯಚರಣೆಗಳ ಹಾಗೂ ನಿರ್ದಿಷ್ಟವಾಗಿ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳ ಹಾರಾಟಕ್ಕೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.
— DGCA (@DGCAIndia) April 30, 2021
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಧಿಸಲಾಗಿದ್ದು, ಇದು ವಿಶೇಷ ವಿಮಾನಯಾನವಾಗಿರುವ ವಂದೇ ಭಾರತ ಮಿಷನ್‍ಗು ಅನ್ವಯ ವಾಗುತ್ತಿದ್ದು, ಜುಲೈ ಬಳಿಕ ಏರ್ ಬಬಲ್ ಮೂಲಕ ವಂದೇ ಭಾರತ್ ಮಿಷನ್ ವಿಮಾನಯಾನ ಆರಂಭಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಈಗಾಗಲೇ ಪ್ರತಿನಿತ್ಯ 3.5ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ದೃಢವಾಗುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.