ಚೆನ್ನೈ: ಇತ್ತೀಚೆಗೆ ಕರ್ನಾಟಕದಲ್ಲಿ ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರು ಅಪಘಾತಕ್ಕೀಡಾಗಿ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ 4 ಜನರ ಪ್ರಾಣ ಉಳಿಸಿದ್ದರು. ಇದೀಗ ಇಂತದ್ದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ಹೌದು. ಬ್ರೈನ್ ಡೆಡ್ ಆಗಿರುವ ಯುವಕನೋರ್ವ ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಪ್ರಾಣ ಉಳಿಸುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾನೆ. ಯುವಕನನ್ನು ಸಲೀಂ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತಕ್ಕೀಡಾಗಿ ಸಲೀಂ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಅವರ ಬ್ರೈನ್ ಡೆಟ್ ಆಗಿರುವುದಾಗಿ ವೈದ್ಯರು ತಿಳಿಸಿದ್ದರು.
Advertisement
Advertisement
ಇತ್ತ ಸಲೀಂ ಬ್ರೈನ್ ಡೆಡ್ ಆದ ವಿಚಾರ ತಿಳಿಯುತ್ತಿದ್ದಂತೆಯೇ ವೈದ್ಯರು ಆತನ ಕುಟುಂಬಕ್ಕೆ ಹೇಳಿದ್ದಾರೆ. ಈ ವೇಳೆ ಸಲೀಂ ಕುಟುಂಬಸ್ಥರು ಆತನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ. ಈ ಮೂಲಕ ಬೇರೆಯವರ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಕುಟುಂಬಸ್ಥರು ಒಪ್ಪಿಗೆ ನೀಡಿದ ಬಳಿಕ ಸೇಲಂನ ತಜ್ಞರ ತಂಡ ಸಲೀಂ ಹೃದಯ ಹಾಗೂ ಶ್ವಾಸಕೋಶವನ್ನು ತೆಗೆದಿದ್ದಾರೆ. ಬಳಿಕ ಅಂಗಾಂಗಳನ್ನು ಅಗತ್ಯ ಇರುವವರಿಗೆಂದು ಸೇಲಂ ವಿಮಾನ ನಿಲ್ದಾಣದಿಂದ ಸಾಗಿಸಲಾಯಿತು. ಹೆಲಿಕಾಪ್ಟರ್ ಮೂಲಕ ಚೆನ್ನೈಗೆ ಸಾಗಿಸಲಾಯಿತು ಎಂದು ಎಂಜಿಎಂ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ
Advertisement
Advertisement
ಇತ್ತ ಇಬ್ಬರು ರೋಗಿಗಳಿಗೆ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಅವರ ಜೀವ ಉಳಿಸುವ ಕಾರ್ಯದಲ್ಲಿ ತಜ್ಞರ ತಂಡ ಯಶಸ್ವಿಯಾಯಿತು. ಕೋವಿಡ್ -19 ಪ್ರೋಟೋಕಾಲ್‍ಗಳನ್ನು ಅನುಸರಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸಲೀಂನ ಉಳಿದ ಅಂಂಗಗಳನ್ನು ಇತರ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಇದನ್ನೂ ಓದಿ: ಶಂಕರ್ ನಾಗ್, ಸುನಿಲ್, ಈಗ ಸಂಚಾರಿ ವಿಜಯ್ -ಅಪಘಾತದಲ್ಲೇ ಬದುಕು ಮುಗಿಸಿದ ಕನ್ನಡ ನಟರು