Connect with us

Cinema

ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ

Published

on

Share this

– ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ

ಬೆಂಗಳೂರು: ಸಂಚಾರಿ ವಿಜಯ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಅವರ ಸಾಮಾಜಿಕ ಕಾರ್ಯ, ನಟನೆ, ಒಳ್ಳೆಯ ಗುಣ ಇರುವಂತಹ ನಟನನ್ನ ಕಳೆದುಕೊಂಡು ಕನ್ನಡಿಗರು ಕಣ್ಣೀರು ಹಾಕುತ್ತಾ ಇದ್ದಾರೆ. ಆದರೆ ಈಗ ಅವರ ನಿಧನದ ನಂತರ ಮಾಡಿರುವ ಮಹಾತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅವರ ಅಂಗಾಂಗ ದಾನದ ನಿರ್ಧಾರಕ್ಕೆ ವೈದ್ಯರು ಅವರ ಪೋಷಕರಿಗೆ ಧನ್ಯವಾದ ತಿಳಿಸುತ್ತಾ ಇದ್ದಾರೆ.

ಸಂಚಾರಿ ವಿಜಯ್ ಅವರ ಕಣ್ಣುಗಳನ್ನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಜೋಡಣೆ ಮಾಡಲಾಗಿದೆ. ಸಂಚಾರಿ ವಿಜಯ್ ಅವರ ವಯಸ್ಸಿನ ಒಬ್ಬರಿಗೆ ಮತ್ತು ಅವರಿಗಿಂತ ಚಿಕ್ಕ ವಯಸ್ಸಿನ ಮತ್ತೊಬ್ಬ ವಯಸ್ಸಿನ ಯುವಕನಿಗೆ ಕಣ್ಣು ಜೋಡಣೆ ಮಾಡಲಾಗಿದೆ. ಇಂದು ಬೆಳಗ್ಗೆಯೇ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿರೋದಾಗಿ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ರಾಯಭಾರ ಕಚೇರಿಯಿಂದ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ

ಈ ಬಗ್ಗೆ ಮಾತನಾಡಿದ ಡಾ. ಸುಜಾತ ರಾಥೋಡ್, ನಮ್ಮಲ್ಲಿ ಇಬ್ಬರಿಗೆ ಕಣ್ಣನ್ನ ಹಾಕಲಾಗಿದೆ. ಇಬ್ಬರೂ ಕೂಡ ಅಗತ್ಯವಾಗಿ ಬೇಕಾದ ರೋಗಿಗಳಿಗೆ ಕಣ್ಣು ಹಾಕಲಾಗಿದೆ. ಬ್ರೈನ್ ಡೆಡ್ ಆದಾಗ ಕಣ್ಣುಗಳು ಉತ್ತಮ ಗುಣಮಟ್ಟದಲ್ಲೇ ಇರುತ್ತೆ ವಿಜಯ್ ಕಣ್ಣುಗಳು ಉತ್ತಮವಾಗಿ ಇದ್ದವು. ಇದನ್ನೂ ಓದಿ: ದೇವರು ನಿಜವಾಗ್ಲೂ ಕ್ರೂರಿ ಅಂದ್ರು ಮೇಘನಾ..!

ವಿಜಯ್ ಅವರ ಕಣ್ಣಿನಿಂದ ಇಬ್ಬರು ಯುವಕರು ಇದೀಗ ಜಗತ್ತನ್ನ ನೋಡುವಂತಾಗಿದೆ. ಆಪರೇಷನ್ ಆಗಿದ್ದು 6 ರಿಂದ 8 ಗಂಟೆ ಬಳಿಕ ದೃಷ್ಟಿ ಬರಲಿದೆ. 24 ಗಂಟೆಯೊಳಗೆ ಅವರ ದೃಷ್ಟಿ ಯಾವ ಪ್ರಮಾಣದಲ್ಲಿದೆ ಗೊತ್ತಾಗತ್ತೆ ಈ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೆವೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

Click to comment

Leave a Reply

Your email address will not be published. Required fields are marked *

Advertisement