– ಕಿಶನ್, ಪೊಲಾರ್ಡ್ ಮಿಂಚಿನಾಟ
ದುಬೈ: ಆರಂಭಿಕ ಹಂತದಲ್ಲಿ ಎಡವಿದ್ದ ಮುಂಬೈ ತಂಡವನ್ನು ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಒಂದು ಹಂತಕ್ಕೆ ತಂದಿದ್ದರು. ಆದರೂ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ತಲುಪಿತು. ಸೂಪರ್ ಓವರ್ ನಲ್ಲಿ ಆರ್ ಸಿಬಿ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯಲಕ್ಷ್ಮಿಯನ್ನು ತನ್ನದಾಗಿಸಿಕೊಳ್ಳಿತು.
That winning feeling ????????????#RCBvMI #Dream11IPL pic.twitter.com/Iqe0cngcEo
— IndianPremierLeague (@IPL) September 28, 2020
Advertisement
ಆರ್ ಸಿಬಿ ನೀಡಿದ್ದ 202ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದ ಮೂರು ಓವರ್ ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೂರು ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಮುಗ್ಗರಿಸಿತು. ಆರಂಭಿಕ ಆಟಗಾರ ಕಿಶನ್ 58 ಬಾಲ್ಗೆ 99 ರನ್ ಗಳಿಸಿದರು. ಅದ್ಭುತ ಪ್ರದರ್ಶನದಿಂದಾಗಿ ಒಂದು ಹಂತಕ್ಕೆ ತಲುಪಿತು. ಆದರೆ ಕಿಶನ್ ಹಾಗೂ ಪೋಲಾರ್ಡ್ ಪ್ರಯತ್ನ ವಿಫಲವಾಯಿತು. ಹೀಗಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಹಂತ ತಲುಪಿತು.
Advertisement
Advertisement
ಟೈ ಹೆಗಾಯ್ತು?
ಕೊನೆಯ 18 ಓವರ್ಗೆ 171 ರನ್ ರನ್ ಗಳಿಸಿ 12 ಬಾಲ್ಗೆ 31ರನ್ಗಳ ಅಗತ್ಯವಿತ್ತು. 19 ಓವರ್ಗಳ ಅಂತ್ಯಕ್ಕೆ ಕಿಶನ್ ಹಾಗೂ ಪೊಲಾರ್ಡ್ ಪಂದ್ಯವನ್ನು ಒಂದು ಹಂತಕ್ಕೆ ತಲುಪಿಸಿದ್ದರು. ಕೊನೆಯ ಓವರ್ ನಲ್ಲಿ 19 ರನ್ಗಳ ಅಗತ್ಯವಿತ್ತು. ಮೂರು ಹಾಗೂ ನಾಲ್ಕನೇ ಬಾಲ್ಗೆ ಸಿಕ್ಸ್ ಬಾರಿಸಿದರು. ಆದರೆ ಇನ್ನೊಂದು ಬಾಲ್ ಇರುವಾಗ ಇಶಾಂತ್ ಕಿಶನ್ ವಿಕೆಟ್ ಒಪ್ಪಿಸಿದರು. ಕೊನೆಯ ಬಾಲ್ಗೆ ಪೊಲಾರ್ಡ್ ಬೌಂಡರಿ ಬಾರಿಸಿದರು. ಈ ಮೂಲಕ ಮ್ಯಾಚ್ ಟೈ ಆಯಿತು.
Advertisement
ಸೂಪರ್ ಓವರ್ ನಲ್ಲಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ಪೋಲಾರ್ಡ್ ನಾಲ್ಕನೇ ಬಾಲ್ಗೆ ಫೋರ್ ಬಾರಿಸಿದರೆ, ಐದನೇ ಬಾಲ್ಗೆ ಕ್ಯಾಚ್ ನೀಡಿದರು. ನಂತರ 7 ರನ್ ಬಾರಿಸಿ ಆರ್ಸಿಬಿಗೆ 8ರನ್ಗಳ ಟಾರ್ಗೆಟ್ ನೀಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಟವಾಡಿದರು. ಆರಂಭದ ಎರಡು ಬಾಲ್ ಸಿಂಗಲ್ಸ್ ನಂತರ ನಾಲ್ಕನೇ ಬಾಲ್ಗೆ ಡಿವಿಲಿಯರ್ಸ್ ಬೌಂಡರಿ ಬಾರಿಸಿದರು. ಮತ್ತೆ ಐದನೇ ಬಾಲ್ ಸಿಂಗಲ್ ತೆಗೆದುಕೊಂಡರೆ, ಕೊನೆಯ ಬಾಲ್ಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.
ಅರಂಭದಲ್ಲೇ ಕುಸಿತ:
ದಾಖಲೆಯ ಸನಿಹದಲ್ಲಿದ್ದ ರೋಹಿತ್ ಶರ್ಮಾ ಆರಂಭಿಕ ಹಂತದಲ್ಲೇ ಸಿಕ್ಸರ್ ಬಾರಿಸಿದರು. ಆದರೆ 8 ಬಾಲ್ಗೆ ಕೇವಲ 8 ರನ್ ಗಳಿಸಿ ನೇಗಿಗೆ ಕ್ಯಾಚ್ ನೀಡಿದರು. ಈ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು. ನಂತರ ಬಂದ ಡಿ ಕಾಕ್ 15 ಬಾಲ್ಗೆ 14ರನ್ ಗಳಿಸಿ ರೋಹಿತ್ ಶರ್ಮಾ ಹಿಂದೆಯೇ ಪೆವಿಲಿಯನ್ ಸೇರಿದರು. ಈ ಮೂಲಕ ಆರಂಭದಲ್ಲೇ ಇಬ್ಬರು ಬ್ಯಾಟ್ಸ್ ಮನ್ ಕಳೆದುಕೊಂಡ ಮುಂಬೈಗೆ ಆಘಾತವಾಯಿತು.
ಡಿ ಕಾಕ್ ಬಳಿಕ ಕ್ರೀಸ್ಗೆ ಬಂದ ಸೂರ್ಯ ಕುಮಾರ್ ಯಾದವ್ ಸಹ ಸೊನ್ನೆ ಸುತ್ತಿದರು. ಹಾರ್ದಿಕ್ ಪಾಂಡ್ಯ ಸಹ 13 ಬಾಲ್ಗೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ ಆರಂಭಿಕ ಆಟ ನೀರಸವೆನಿಸಿತು. 6 ಓವರ್ನಲ್ಲಿ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ಸೂಚನೆ ನೀಡಿತು.
ಇಶಾನ್ ಕಿಶನ್ ಹಾಗೂ ಪೊಲಾರ್ಡ್ ತಂಡವನ್ನು ಗೆಲ್ಲಿಸಲು ಯತ್ನಿಸಿದರು ಸಹ ಸಾಧ್ಯವಾಗಲಿಲ್ಲ. ಇಶಾಂತ್ ಕಿಶನ್ 58 ಬಾಲ್ಗೆ 99 ರನ್ ಗಳಿಸಿದರು. 9 ಸಿಕ್ಸ್ ಹಾಗೂ ಎರಡು ಬೌಂಡರಿ ಬಾರಿಸಿದ್ದರು. ಕಿಶನ್ಗೆ ಸಾಥ್ ನೀಡಿದ ಪೊಲಾರ್ಡ್ 24 ಬಾಲ್ಗೆ 60 ರನ್ ಸಿಡಿಸಿದರು. ಇಸುರು ಉದಾನಾ, ವಾಷಿಂಗ್ಟನ್ ಸುಂದರ್, ಚಹಲ್, ಆಡಮ್ ಝಾಂಪಾ ತಲಾ ಒಂದು ವಿಕೆಟ್ ಪಡೆದರು.