ಲ್ಯುಕೇಮಿಯಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಶ್ವಾನವನ್ನು ಅದರ ಮಾಲೀಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಶ್ವಾನಪ್ರಿಯರು ಈ ಕಥೆ ಕೇಳಿ ಭಾವುಕರಾಗಬಹುದು. ಅಲ್ಲದೇ ಕಣ್ಣೀರು ಸಹ ತರಿಸಬಹುದು, ಆದರೆ ಈ ಕಥೆಯನ್ನು ನೀವು ಕೇಳಲೇಬೇಕು. 10 ವರ್ಷದ ಲ್ಯಾಬ್ರಡೂಡ್ಲ್ ಎಂಬ ಮಾಂಟಿ ಹೆಸರಿನ ಶ್ವಾನವೊಂದು ಲ್ಯುಕೇಮಿಯಾ ಕಾಯಿಲೆ ವಿರುದ್ಧ ತಿಂಗಳು ಗಟ್ಟಲೇ ಹೋರಾಡಿ ನಿಧನ ಹೊಂದಿದೆ. ಆದರೆ ಈ ಮುನ್ನ ಶ್ವಾನದ ಮಾಲೀಕ ಕಾರ್ಲೋಸ್ ಫ್ರೆಸ್ಕೊ ತನ್ನ ಶ್ವಾನದೊಂದಿಗೆ ಕೊನೆಯಾದಾಗಿ ಟ್ರಿಪ್‍ಗೆ ಹೋಗಿ ಅದರ ಜೊತೆ ಕಾಲ ಕಳೆದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಅನಾರೋಗ್ಯದಿಂದಾಗಿ ಮಾಂಟಿಗೆ ನಡೆಯಲು ಸಾಧ್ಯವಾಗದ ಕಾರಣ, ಕಾರ್ಲೋಸ್ ಮಾಂಟಿಯನ್ನು ವೇಲ್ಸ್‍ನ ಬ್ರೆಕಾನ್‍ನಲ್ಲಿರುವ ತಮ್ಮ ನೆಚ್ಚಿನ ಪವರ್ತಕ್ಕೆ ವೀಲ್ ಚೇರ್ ಮುಖಾಂತರ, ಮಾಂಟಿಯನ್ನು ಕರೆದುಕೊಂಡು ಹೋಗಿದ್ದರು. ಈ ಮುನ್ನ ಕಾರ್ಲೋಸ್ ಹಾಗೂ ಮಾಂಟಿ ಜೊತೆಗೆ ಹಲವಾರು ಬಾರಿ ಟ್ರಿಪ್‍ಗೆ ಒಟ್ಟಿಗೆ ಹೋಗಿದ್ದೆವು. ಆದರೆ ಈ ಬಾರಿ ಮಾಂಟಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಿಂದ ನಾನು ಅವನೊಂದಿಗೆ ಹೋಗುತ್ತಿರುವ ಕೊನೆ ಟ್ರಿಪ್ ಎಂದು ನನಗೆ ಮೊದಲೇ ಗೊತ್ತಿರುವುದಾಗಿ ತಿಳಿಸಿದ್ದರು. 18 ತಿಂಗಳ ಹಿಂದೆ ಮಾಂಟಿಗೋ ಕೀಮೋಥೆರಪಿ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದನು. ಆದರೆ ಕೊನೆಗೆ ಚಿಕಿತ್ಸೆ ಫಲಾಕಾರಿಯಾಗಲಿಲ್ಲ.
Advertisement
ಅಲ್ಲದೇ ನಾನು ಅವನು ಪ್ರವಾಸಕ್ಕೆ ಹೋದಾಗ ಅಲ್ಲಿ ಕೆಲವು ಸ್ಥಳೀಯರು ಮಾಂಟಿ ಕುಳಿತಿದ್ದ ವೀಲ್ ಚೇರ್‍ನನ್ನು ತಳ್ಳುತ್ತಾ ಅವನೊಂದಿಗೆ ಸುಂದರವಾದ ಕಾಲ ಕಳೆದರು. ಈ ವೇಳೆ ಮಾಂಟಿ ದುರ್ಬಲನಾಗಿದ್ದರೂ ಅನೇಕ ಮಂದಿಗೆ ಹತ್ತಿರವಾದ, ಎಲ್ಲರ ಗಮನ ಸೆಳೆಯುವುದರ ಜೊತೆಗೆ ಅನೇಕ ಮಂದಿ ಅವನಿಗೆ ಶುಭ ಹಾರೈಸಿದರು. ಪರ್ವದ ಮೇಲಿದ್ದ ಮಂದಿ ಇವನ ಕಥೆಯನ್ನು ಕೇಳಿ ದುಃಖಿತರಾಗಿದ್ದರು. ಇದನ್ನೂ ಓದಿ:ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ