ಕೊಲಂಬೋ: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‍ನಲ್ಲಿ ಆರಂಭಿಕನಾಗಿ 10 ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ.
Advertisement
ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ 86ರನ್(95 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ 10,000ರನ್ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ 10 ಸಾವಿರ ರನ್ ಸಿಡಿಸಿದ ಭಾರತದ 5 ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
1⃣0⃣0⃣0⃣0⃣ more reasons to love Gabbar ????
6th Fastest ???????? to the milestone and the 5th Fastest sitting in the dugout would surely be pleased with that one ????#SLvIND #ShikharDhawan pic.twitter.com/AaVBf7XUsI
— Delhi Capitals (@DelhiCapitals) July 18, 2021
Advertisement
ಈ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಧವನ್ ಶ್ರೀಲಂಕಾ ವಿರುದ್ಧ 1000 ರನ್ ಪೂರೈಸಿ ಸಂಭ್ರಮಪಟ್ಟರು. ಅದಾದ ಬಳಿಕ ಏಕದಿನ ಕ್ರಿಕೆಟ್‍ನಲ್ಲಿ 6,000 ರನ್ ಸಿಡಿಸಿದ 10 ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದನ್ನೂ ಓದಿ: ಹುಟ್ಟುಹಬ್ಬದಂದೇ ಟೀಂ ಇಂಡಿಯಾ ಕ್ಯಾಪ್ ಧರಿಸಿದ ಇಶಾನ್ ಕಿಶನ್
Advertisement
ಏಕದಿನ ಕ್ರಿಕೆಟ್‍ನಲ್ಲಿ ಈವರೆಗೆ ಭಾರತ ತಂಡದ ಆಟಗಾರರರಾದ ಸಚಿನ್ ತೆಂಡೂಲ್ಕರ್ 18,426ರನ್, ವಿರಾಟ್ ಕೊಹ್ಲಿ 12,169ರನ್, ಸೌರವ್ ಗಂಗೂಲಿ 11,363ರನ್, ರಾಹುಲ್ ದ್ರಾವಿಡ್ 10,889ರನ್, ಎಂ.ಎಸ್ ಧೋನಿ 10,773ರನ್, ಮೊಹಮ್ಮದ್ ಅಜರುದ್ದೀನ್ 9,378ರನ್, ರೋಹಿತ್ ಶರ್ಮಾ 9,205ರನ್, ಯುವರಾಜ್ ಸಿಂಗ್ 8,701 ಮತ್ತು ವಿರೇಂದ್ರ ಸೆಹ್ವಾಗ್ 8,273ರನ್ ಇದೀಗ ಧವನ್ 6,063 ಸಿಡಿಸಿದ್ದಾರೆ. ಅದಲ್ಲದೆ ಅತೀ ವೇಗವಾಗಿ 6,000ರನ್ ಸಿಡಿಸಿದ ಎರಡನೇ ಆಟಗಾರನಾಗಿ ಧವನ್ ಗುರುತಿಸಿಕೊಂಡಿದ್ದಾರೆ.
ಧವನ್ 140 ಇನ್ನಿಂಗ್ಸ್‍ಗಳಿಂದ 6,000 ರನ್ ಪೂರೈಸಿದರೆ, ವಿರಾಟ್ ಕೊಹ್ಲಿ 136 ಇನ್ನಿಂಗ್ಸ್ ಗಳಿಂದ 6,000ರನ್ ಚಚ್ಚಿದ್ದಾರೆ. ಉತ್ತಮ ಫಾರ್ಮ್‍ನಲ್ಲಿರುವ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಮುಂದಿನ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ಆರಂಭಿಕ ಸ್ಥಾನ ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.