ಮಳೆಗಾಲ ಶುರುವಾಗಿದೆ. ಚಳಿ ಇರುವುದರಿಂದ ನಾಲಿಗೆ ಕೊಂಚ ಬಿಸಿ ಬಸಿಯಾಗಿ ಏನನ್ನಾದರು ತಿನ್ನಲು ಬಯಸುತ್ತದೆ. ಪ್ರತಿನಿತ್ಯ ಒಂದಲ್ಲಾ ಒಂದು ರುಚಿಕರವಾದ ಅಡುಗೆಯನ್ನು ಮಾಡಿ ಸವಿಯುವ ನೀವು ಇಂದು ಮನೆಯಲ್ಲಿ ಬಿಸಿ ಬಿಸಿಯಾದ ಹೆಸರು ಬೇಳೆ ಪಕೋಡವನ್ನು ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ- 1ಕಪ್
* ಹಸಿಮೆಣಸಿನಕಾಯಿ-3
* ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಸ್ಪೂನ್
* ಶುಂಠಿ- ಅರ್ಧ ಟೀ ಸ್ಪೂನ್
* ಅಡುಗೆ ಎಣ್ಣುಗೆ
* ಕೊತ್ತಂಬರಿ
* ರುಚಿಗೆ ತಕ್ಕಷ್ಟು ಉಪ್ಪು
* ಕೋತ್ತಂಬರಿ ಬೀಜ- 1 ಟೀ ಸ್ಪೂನ್
* ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ:
* ಪಾತ್ರೆಯಲ್ಲಿ ಹೆಸರುಬೇಳೆಯನ್ನು ಹಾಕಿ, 3-4 ಗಂಟೆಗಳ ಕಾಲ ನೆನೆಯಿಟ್ಟಿರಬೇಕು. ಇದನ್ನೂ ಓದಿ: ನೀವು ಮಾಡಿ ಸಿಹಿ ದೋಸೆ
Advertisement
* ನಂತರ ಮಿಕ್ಸರ್ ಪಾತ್ರೆಗೆ ನೆನೆಸಿಕೊಂಡ ಹೆಸರುಬೇಳೆ, ಹಸಿಮೆಣಸಿನ ಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವು ದಪ್ಪ ಸ್ಥಿರತೆಯಿಂದ ಕೂಡಿರಬೇಕು.ಹೆಚ್ಚಾಗಿ ನೀರನ್ನು ಸೇರಿಸಬಾರದು
* ರುಬ್ಬಿಕೊಂಡ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ ಮಿಶ್ರಗೊಳಿಸಬೇಕು.
* ಬಾಣಲೆಯಲ್ಲಿ ಎಣ್ಣೆ ಎಣ್ಣೆ ಬಿಸಿಯಾದ ಬಳಿಕ ಪಕೋಡವನ್ನು ಬಿಡಿ. ಪಕೋಡವು ಎರಡು ಬದಿಯಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರುವ ತನಕ ಫ್ರೈ ಮಾಡಿದರೆ ರುಚಿಯಾ ಬಿಸಿ ಬಿಸಿಯಾದ ಹೆಸರುಬೇಳೆ ಪಕೋಡ ಸವಿಯಲು ಸಿದ್ಧವಾಗುತ್ತದೆ.