‘ನಾನು, ನನ್ನ ಕುಟುಂಬ, ಸಮಾಜ ಚೆನ್ನಾಗಿರಬೇಕು ಅಂದ್ರೆ ಮನೆಯಲ್ಲಿ ಬಿದ್ದಿರಬೇಕು’
ಶಿವಮೊಗ್ಗ: ಜಿಲ್ಲೆಯಲ್ಲಿ ಜಾರಿ ಮಾಡಲಾಗಿದ್ದ ಹಾಫ್ ಲಾಕ್‍ಡೌನನ್ನು ಇಂದಿನಿಂದ ರದ್ದುಗೊಳಿಸಲಾಗಿದೆ. ಆದರೆ ನಗರದ 7 ವಾರ್ಡ್‍ಗಳನ್ನು ಸೀಲ್‍ಡೌನ್ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಫ್ ಲಾಕ್‍ಡೌನ್ ಜಾರಿಗೊಳಿಸಿದ್ದೆವು. ಆದರೆ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಹಾಫ್ ಲಾಕ್‍ಡೌನನ್ನು ಹಿಂಪಡೆದುಕೊಂಡಿದ್ದು, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದ ವಾರ್ಡ್ ನಂಬರ್ 22, 23, 29, 30 ಸಂಪೂರ್ಣ ಸೀಲ್‍ಡೌನ್ ಹಾಗೂ ವಾರ್ಡ್ ನಂಬರ್ 12, 13 ಹಾಗೂ 33 ರಲ್ಲಿ ಭಾಗಶಃ ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ನಾಲಿಗೆ ಹರಿಬಿಟ್ಟ ಈಶ್ವರಪ್ಪ
Advertisement
Advertisement
ಸೀಲ್‍ಡೌನ್ ಪ್ರದೇಶಗಳಲ್ಲಿ ಮುಂಜಾನೆ 5 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಳ್ಳಲಾಗಿದೆ. ಅಲ್ಲದೇ 10 ಗಂಟೆಯ ನಂತರ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಆ್ಯಂಟಿಜೆನ್ ಕಿಟ್‍ನಿಂದ ರ್ಯಾಪಿಡ್ ಟೆಸ್ಟ್ ನಡೆಸಿ ಸ್ಥಳದಲ್ಲಿಯೇ ವರದಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
Advertisement
ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಜನರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟವಾಡಬೇಡಿ. ನೀವು ಬದುಕಿ ಜನರನ್ನು ಬದುಕಲು ಬಿಡಿ. ಸುಖಾಸುಮ್ಮನೆ ಸಂಚರಿಸಿ ಕೊರೊನಾ ಹಬ್ಬಿಸಬೇಡಿ. ನನ್ನ ಜೀವ ಉಳಿಸಿಕೊಳ್ಳಬೇಕು. ನನ್ನ ಕುಟುಂಬ, ಸಮಾಜ ಚೆನ್ನಾಗಿರಬೇಕು ಅಂದರೆ ಮನೆಯಲ್ಲಿಯೇ ಬಿದ್ದಿರಬೇಕು ಎಂದು ಸಚಿವ ಈಶ್ವರಪ್ಪ ಖಾರವಾಗಿ ಎಚ್ಚರಿಕೆ ನೀಡಿದರು.