ಬೆಂಗಳೂರು: ಬಿಗ್ಬಾಸ್ ವಾರದ ಕಥೆಯಲ್ಲಿ ಸುದೀಪ್ ನಾಯಕ ಶಮಂತ್ ಗೌಡ(ಬ್ರೋ ಗೌಡ) ಅವರಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದಾರೆ.
ಮೊದಲ ವಾರದಲ್ಲೇ ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡಿದ್ದರು. ಚಂದ್ರಕಲಾ ಮೋಹನ್, ನಿರ್ಮಲ ಮತ್ತು ನಿಧಿ ಸುಬ್ಬಯ್ಯ ಅವರಿಗೆ ಅಡುಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ನಿರ್ಮಲ ಅಡುಗೆ ಮನೆ ಕೆಲಸದಲ್ಲಿ ತೊಡಗಿಕೊಳ್ಳದ ಕಾರಣ ಚಂದ್ರಕಲಾ ಅವರಿಗೆ ಸಿಟ್ಟು ಬಂದಿತ್ತು. ಈ ಕಾರಣಕ್ಕೆ ಇಬ್ಬರೂ ಎಲ್ಲರ ಮುಂದೆಯೇ ಜಗಳವಾಡಿದ್ದರು.
Advertisement
Advertisement
ವಾರದ ಕಥೆಯಲ್ಲಿ ಸುದೀಪ್ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ನಾಯಕ ಶಮಂತ್ ಗೌಡರನ್ನು ಈ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಅಡುಗೆ ಮನೆಯಲ್ಲಿ ಕೆಲಸ ಇಲ್ಲ. ಚಂದ್ರಕಲಾ ಅವರೇ ಮಾಡುತ್ತಿದ್ದಾರೆ ನಾನು ಶೌಚಾಲಯ ಕ್ಲೀನ್ ಮಾಡುತ್ತೇನೆ ಎಂದು ನಿರ್ಮಲ ಹೇಳಿದ್ದರು. ಅದಕ್ಕೆ ನಾನು ಮೊದಲು ಅಡುಗೆ ಜವಾಬ್ದಾರಿಯನ್ನು ನೋಡಿಕೊಳ್ಳಿ. ನಂತರ ಫ್ರೀ ಆದರೆ ಶೌಚಾಲಯ ಇತ್ಯಾದಿ ಕೆಲಸ ಮಾಡಿ” ಎಂದು ಹೇಳಿದ್ದೆ ಎಂದರು.
Advertisement
Advertisement
ಇದಕ್ಕೆ ಸುದೀಪ್ ಯಾರಿಗೆ ಯಾವ ಟಾಸ್ಕ್ ಕೊಡಲಾಗಿದೆಯೋ ಅವರು ಅದನ್ನೇ ಮಾಡಬೇಕು. ಬೇರೆಯವರು ಬೇರೆ ಕೆಲಸ ಮಾಡುತ್ತಾರೆ. ನಾಯಕನಾದವರು ಈ ವಿಚಾರದಲ್ಲಿ ಸ್ಪಷ್ಟತೆಯನ್ನು ಹೊಂದಿರಬೇಕು. ಇನ್ನು ಮುಂದೆ ಈ ರೀತಿ ತಪ್ಪುಗಳು ಮನೆಯಲ್ಲಿ ನಡೆಯಬಾರದು ಎಂದು ನಾಯಕತ್ವದ ಪಾಠವನ್ನು ಹೇಳಿಕೊಟ್ಟರು.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್ ಎರಡನೇ ವಾರವೂ ನಾಯಕನಾಗಿ ಮುಂದುವರಿದಿದ್ದಾರೆ. ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನ ತೆಗೆದುಕೊಂಡಿದ್ದಾರೆ.