– ಇದು ವಿಜ್ಞಾನಕ್ಕೆ ಅಪಮಾನ ಎಂದ ಚೀನಾ
ಬೀಜಿಂಗ್: ಇಡೀ ವಿಶ್ವಕ್ಕೆ ಸಾಂಕ್ರಾಮಿಕ ರೋಗ ಕೊರೊನಾ ಹಬ್ಬಿದ್ದು ಹೇಗೆ ಎಂಬುದರ ರಸಹ್ಯ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಚೀನಾದ ವುಹಾನ್ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಸ್ ಉತ್ಪತ್ತಿಯಾಗಿದೆ ಎಂದು ಹೇಳುತ್ತಿವೆ. ಈ ಆರೋಪಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ವುಹಾನ್ ಲ್ಯಾಬ್ ಪರಿಶೀಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ನಡೆಯನ್ನು ಚೀನಾ ವಿರೋಧಿಸಿದ್ದು, ಇದು ವಿಜ್ಞಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಹೇಳಿದೆ.
Advertisement
ಕೊರೊನಾದ ಮೂಲ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಬಾರಿಗೆ ಚೀನಾ ಮತ್ತು ವುಹಾನ್ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸುವ ಪ್ರಸ್ತಾವವನ್ನು ಮುಂದಿರಿಸಿತ್ತು. ಆದ್ರೆ ಚೀನಾ ಕಡ್ಡಿ ತುಂಡು ಮಾಡಿದಂತೆ ಪ್ರಸ್ತಾವವನ್ನು ತಿರಸ್ಕರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಆದೇಶ ಅಥವಾ ಪ್ರಸ್ತಾವವನ್ನು ನಾವು ಪಾಲನೆ ಮಾಡಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪಾಧ್ಯಕ್ಷ ಜೆಂಗ್ ಯೆಕ್ಸಿನ್ ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟದ ಆರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿದ್ರು ವುಹಾನ್ನ ಮೂವರು ಸಂಶೋಧಕರು
Advertisement
Advertisement
ವಿಶ್ವಸಂಸ್ಥೆ ಮತ್ತೊಮ್ಮೆ ವುಹಾನ್ ನಗರದಲ್ಲಿರುವ ಪ್ರಯೋಗಾಲಯದಲ್ಲಿ ತನಿಖೆ ನಡೆಸುವ ಪ್ಲಾನ್ ಮಾಡಿಕೊಳ್ಳುತ್ತಿದೆ. ಕೇವಲ ಲ್ಯಾಬ್ ಲೀಕ್ ಥೇರಿ ಮೇಲೆ ತನಿಖೆ ನಡೆಸೋದು ವಿಜ್ಞಾನಕ್ಕೆ ಮಾಡಿದ ಅಪಮಾನ ಆಗಲಿದೆ ಎಂದು ಯೆಕ್ಸಿನ್ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವುಹಾನ್ ಲ್ಯಾಬ್ನಿಂದ ಕೊರೊನಾ ವೈರಸ್ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್ಒ ನಿಯೋಗ
Advertisement
ಸದ್ಯ ಕೊರೊನಾ ವೈರಸ್ ವಿಶ್ವದ ತುಂಬೆಲ್ಲ ಪಸರಿಸಿದೆ. ಡಿಸೆಂಬರ್ 2019ರಲ್ಲಿ ಚೀನಾ ಈ ಮಹಾಮಾರಿಗೆ ತುತ್ತಾಗಿತ್ತು. ಅಂದೇ ಚೀನಾ ಕೊರನಾ ಮಾಹಾಮಾರಿಯ ಬಗ್ಗೆ ವಿಶ್ವಕ್ಕೆ ಮಾಹಿತಿ ನೀಡಿತ್ತು. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ತಂಡ ಇಲ್ಲಿಗೆ ಬಂದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ತಂಡ ಬಯಸಿದ ಪ್ರಯೋಗಾಲಯಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಜೊತೆಗೆ ತಂಡದ ಸದಸ್ಯರ ಭೇಟಿಯಾಗಲು ಇಚ್ಛಿಸಿದ ಜನರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ವುಹಾನ್ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ
ಡಬ್ಲ್ಯೂಹೆಚ್ಓ ವೈಜ್ಞಾನಿಕ ಆಧಾರದ ಮೇಲೆ ಕೊರೊನಾ ಮೂಲವನ್ನು ಕಂಡು ಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಲ್ಲ ಅನ್ನೋದು ನಮ್ಮ ನಂಬಿಕೆ ಎಂದು ಯೆಕ್ಸಿನ್ ಹೇಳಿದ್ದಾರೆ.