– ಮಾನಸಿಕ ಒತ್ತಡದಲ್ಲಿದ್ದ ದಂಪತಿ
– ನೇಣು ಬಿಗಿದುಕೊಂಡು ಆತ್ಮಹತ್ಯೆ
ಜೈಪುರ/ಜೋಧಪುರ: ಪುತ್ರ ವಿವಾಹಿತೆ ಜೊತೆ ಓಡಿ ಹೋಗಿದ್ದಕ್ಕೆ ನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೋಧಪುರದ ದೇವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಷ್ಣು ದತ್ ಮತ್ತು ಮಂಜು ದೇವಿ ಆತ್ಮಹತ್ಯೆಗೆ ಶರಣಾದ ದಂಪತಿ. ಕೆಲವು ದಿನಗಳ ಹಿಂದೆ ದಂಪತಿಯ ಮಗ ವಿವಾಹಿತ ಮಹಿಳೆ ಜೊತೆ ಮನೆಬಿಟ್ಟು ಓಡಿ ಹೋಗಿದ್ದನು. ಮಗನ ಈ ಕೆಲಸದಿಂದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಊರಿನಲ್ಲಿ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಿತ್ತು. ಇದೇ ಕಾರಣದಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ನಾಲ್ಕನೇ ಬಾರಿ ಮದುವೆಯಾಗಲು ಮಗನನ್ನೇ ಕೊಂದ 23ರ ವಿಧವೆ
ಭಾನುವಾರ ಬೆಳಗ್ಗೆಯಾದ್ರೂ ದಂಪತಿ ಮನೆಯಿಂದ ಹೊರ ಬಂದಿರಲಿಲ್ಲ. ಪಕ್ಕದ ಮನೆಯವರು ಬಾಗಿಲು ತಟ್ಟಿದರೂ ಯಾರು ಉತ್ತರ ನೀಡಿರಲಿಲ್ಲ. ಕೊನೆಗೆ ಅನುಮಾನಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ದಂಪತಿ ಶವ ನೇತಾಡುತ್ತಿರೋದು ಬೆಳಕಿಗೆ ಬಂದಿದೆ. ಕೂಡಲೇ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪರಿಚಯಸ್ಥನಿಂದ ರೇಪ್- ಸೆಕ್ಸ್ ವಿಡಿಯೋ ತೋರ್ಸಿ 9.7 ಲಕ್ಷ ಹಣ ಪಡೆದ
ಘಟನೆಗೆ ಸಂಬಂಧಿಸಿದಂತೆ ದಂಪತಿಯ ಸಂಬಂಧಿಯೊಬ್ಬರು ದೂರು ದಾಖಲಿಸಿದ್ದಾರೆ. ಮೃತದೇಹವನ್ನು ಸಮೀಪದ ಮಥುರಾ ಆಸ್ಪತ್ರೆಯಲ್ಲಿರಿಸಲಾಗಿದೆ. ಕೊರೊನಾ ಟೆಸ್ಟ್ ಬಳಿಕ ಮರಣೋತ್ತರ ಶವ ಪರೀಕ್ಷೆ ನಡೆಸಲಾಗುವುದು ಎಂದು ದೇವನಗರ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಾಸನಾಗಿದ್ದ ಅಣ್ಣನಿಂದ್ಲೇ ತಂಗಿಯ ರೇಪ್- 8 ತಿಂಗ್ಳ ಗರ್ಭಿಣಿಯಾದ ಅಪ್ರಾಪ್ತೆ