Connect with us

Crime

ಪರಿಚಯಸ್ಥನಿಂದ ರೇಪ್- ಸೆಕ್ಸ್ ವಿಡಿಯೋ ತೋರ್ಸಿ 9.7 ಲಕ್ಷ ಹಣ ಪಡೆದ

Published

on

-ಅತ್ಯಾಚಾರದ ಬಳಿಕ ಸಂತ್ರಸ್ತೆಗೆ ಧಮ್ಕಿ
-ಹಂತ ಹಂತವಾಗಿ ಹಣ ಪಡೆದ ಕಾಮುಕ

ಚಂಡೀಗಢ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವಿಡಿಯೋ ರೆಕಾರ್ಡ್ ಮಾಡಿ ಸಂತ್ರಸ್ತೆಯಿಂದ 10 ಲಕ್ಷ ರೂ.ಗೂ ಅಧಿಕ ಹಣ ಪಡೆದಿರುವ ಘಟನೆ ಹರಿಯಾಣದ ಹಿಸ್ಸಾರ್ ನಲ್ಲಿ ನಡೆದಿದೆ. ಶನಿವಾರ ಸಂತ್ರಸ್ತೆ ಈ ಸಂಬಂಧ ಹಿಸ್ಸಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತ್ಯಾಚಾರ, ಜೀವ ಬೆದರಿಕೆ, ಬ್ಲ್ಯಾಕ್‍ಮೇಲ್ ಮಾಡಿ 9 ಲಕ್ಷದ 70 ಸಾವಿರ ಹಣ ಪಡೆದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಾಸನಾಗಿದ್ದ ಅಣ್ಣನಿಂದ್ಲೇ ತಂಗಿಯ ರೇಪ್- 8 ತಿಂಗ್ಳ ಗರ್ಭಿಣಿಯಾದ ಅಪ್ರಾಪ್ತೆ

ಅಶ್ಲೀಲ ಫೋಟೋ ಜೊತೆ ಸೆಕ್ಸ್ ವಿಡಿಯೋ: ಸೆಪ್ಟೆಂಬರ್ 2018ರಲ್ಲಿ ಬಾಲಕೃಷ್ಣ ಎಂಬಾತನ ಪರಿಚಯವಾಯ್ತು. ಒಂದು ದಿನ ಬಾಲಕೃಷ್ಣನ ಸಿನಿಮಾ ನೋಡಲು ನನ್ನನ್ನು ಕರೆದುಕೊಂಡು ಹೋಗಿದ್ದನು. ಅದೇ ದಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಬಾಲಕೃಷ್ಣ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅಶ್ಲೀಲ ಫೋಟೋಗಳ ಜೊತೆ ಸೆಕ್ಸ್ ವಿಡಿಯೋ ಸಹ ರೆಕಾರ್ಡ್ ಮಾಡಿಕೊಂಡಿದ್ದನು. ಇದನ್ನೂ ಓದಿ: ಹಾಸನ -ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕ

ಅತ್ಯಾಚಾರದ ಬಳಿಕ ಆರೋಪಿ ಬಾಲಕೃಷ್ಣ ವಿಡಿಯೋ ಮತ್ತು ಫೋಟೋ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಲು ಆರಂಭಿಸಿದನು. ಅಂದಿನಿಂದ ಇಂದಿನವರೆಗೆ ಆತ ಹಂತ ಹಂತವಾಗಿ ನನ್ನಿಂದ 9 ಲಕ್ಷದ 70 ಸಾವಿರ ಹಣ ಪಡೆದುಕೊಂಡಿದ್ದಾನೆ. ಒಂದು ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕುಟುಂಬಸ್ಥರನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆ ಹೇಳಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನದಲ್ಲಿ ಜಿಗುಪ್ಸೆ-ಗೆಳೆಯನ ಜೊತೆ ಜೂಟ್‍ಗೆ ಪ್ಲಾನ್- ಸಹಾಯಕ್ಕೆ ಬಂದ ಇನಿಯನ ಗೆಳೆಯನಿಂದ್ಲೇ ರೇಪ್

ಆರೋಪಿ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಸಂತ್ರಸ್ತೆಯಿಂದ ಆರೋಪಿ ಹಣ ಸಹ ಪಡೆದುಕೊಂಡಿದ್ದಾನೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿಸ್ಸಾರ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *