Advertisements

ವರದಕ್ಷಿಣೆ ಕಿರುಕುಳ – 5 ದಿನಗಳ ಬಳಿಕ ನವವಿವಾಹಿತೆ ಶವ ಪತ್ತೆ

ಹಾಸನ: ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ನದಿಗೆ ಜಿಗಿದಿದ್ದ ನವವಾಹಿತೆ ಶವ ಐದು ದಿನಗಳ ಬಳಿಕ ಪತ್ತೆಯಾಗಿದೆ.

Advertisements

ಪೂಜಾ(20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಆಗಸ್ಟ್ 5 ರಂದು ಸಕಲೇಶಪುರದ ಹೇಮಾವತಿ ಸೇತುವೆಗೆ ಹಾರಿ ಪೂಜಾ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. 5 ದಿನದಿಂದ ಮಗಳ ಮೃತ ದೇಹಕ್ಕಾಗಿ ದಿನವೂ ಹೊಳೆಯ ಬಳಿ ಪೋಷಕರು ರೋಧಿಸುತ್ತಿದ್ದರು. ಅಲ್ಲದೇ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದರು. ಜೊತೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಸತತ ಹುಡುಕಾಟ ನಡೆಸಿತ್ತು. ಆದ್ರೆ ಇದೀಗ ಪೂಜಾ ಮೃತದೇಹ ಸಿಕ್ಕಿದೆ.

Advertisements

ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಾ ಗ್ರಾಮದ ಪೂಜಾ, ಸಕಲೇಶಪುರ ಅಶ್ವಥ್ ನನ್ನ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದು ಪೂಜಾರವರ ಪೋಷಕರು 8 ತಿಂಗಳ ಹಿಂದೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಅದನ್ನು ದಿಕ್ಕರಿಸಿ ಪೂಜಾ ಅಶ್ವಥ್ ಎಂಬಾತನನ್ನು ಮದುವೆಯಾಗಿದ್ದಳು.

Advertisements

ಸದ್ಯ ಪೂಜಾ ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಫೋನ್‍ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆ – ವರ್ಷ ಆಗುವುದರೊಳಗೆ ಯುವತಿ ಆತ್ಮಹತ್ಯೆ!

Advertisements
Exit mobile version