ಬಳ್ಳಾರಿ: ಲಾಕ್ಡೌನ್ನಿಂದಾಗಿ ಪ್ರಾಣಿಗಳಿಗೆ ಸಹ ಸಂಕಷ್ಟ ಎದುರಾಗಿದ್ದು, ಮೂಕ ಪ್ರಾಣಿಗಳ ಪರಿಸ್ಥಿತಿ ಯಾರಿಗೂ ಹೇಳತೀರದಾಗಿದೆ. ಇದನ್ನು ಅರಿತ ಕಾಲೇಜು ವಿದ್ಯಾರ್ಥಿಗಳು ತಮ್ಮದೇ ತಂಡ ಮಾಡಿಕೊಂಡು ಪೋಷಕರು ನೀಡಿದ ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ ನೀಡುತ್ತಿದ್ದಾರೆ.
Advertisement
ನಗರದಲ್ಲಿ ಬಹುತೇಕ ಬೀದಿ ಬದಿಯ ದನಕರುಗಳು ಲಾಕ್ಡೌನ್ನಿಂದ ಜನರ ಓಡಾಟವಿಲ್ಲದೆ, ಆಹಾರವೂ ಇಲ್ಲದೆ ಬೀದಿಯಲ್ಲಿನ ಪೆಪರ್, ಕೆಲ ವೇಸ್ಟ್ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಇದನ್ನರಿತ ಕೆಲ ವಿಧ್ಯಾರ್ಥಿಗಳು ಟೀಮ್ ಮಾಡಿಕೊಂಡು, ಕೆಲ ದಿನಗಳಿಂದ ಬೀದಿ ಬದಿಯ ದನಕರುಗಳಿಗೆ, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ದನಕರುಗಳ ಹಸಿವನ್ನು ನೀಗಿಸುತ್ತಿದ್ದಾರೆ.
Advertisement
ಪ್ರತಿ ದಿನ ಬೀದಿ ನಾಯಿಗಳಿಗೆ 30 ಕೆ.ಜಿ.ಯಿಂದ 40 ಕೆ.ಜಿ. ಆಹಾರವನ್ನು ತಯಾರು ಮಾಡಿಕೊಂಡು, ವಿದ್ಯಾರ್ಥಿಗಳು 8 ತಂಡಗಳಾಗಿ ತಮ್ಮ ವಾಹನಗಳ ಮೇಲೆ ನಗರದಲ್ಲಿ ಬಹುತೇಕ ನಾಯಿಗಳಿಗೆ ಆಹಾರ ನೀಡುತಿದ್ದಾರೆ.
Advertisement
Advertisement
ಬಹುತೇಕರು ಪದವಿ ವಿದ್ಯಾರ್ಥಿಗಳಾಗಿದ್ದು, ಕೊರೊನಾ ಪರಿಸ್ಥಿತಿ ನೋಡಿ ಸಹಾಯ ಮಾಡಬೇಕೆಂದು ಅನಿಸಿತು. ನಮ್ಮ ಪಾಕೆಟ್ ಮನಿಯಿಂದ ಏನಾದರೂ ಮಾಡಬೇಕೆಂದು ಸ್ನೇಹಿತರೆಲ್ಲ ಯೋಚಿಸಿದೆವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳ ತಂದೆ, ತಾಯಂದಿರು ಡ್ರೈವರ್, ಮನೆಗೆಲಸ ಮಾಡುತಿದ್ದಾರೆ. ಬಡತನದಲ್ಲೂ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುತ್ತಿದ್ದಾರೆ.