Connect with us

Cricket

ರೋಹಿತ್ ಶರ್ಮಾ ಭಾರತ ತಂಡದ ಮುಂದಿನ ಧೋನಿ: ಸುರೇಶ್ ರೈನಾ

Published

on

ನವದೆಹಲಿ: ಭಾರತದ ಉಪನಾಯಕ ರೋಹಿತ್ ಶರ್ಮಾ ಭಾರತ ತಂಡದ ಮುಂದಿನ ಧೋನಿ ಎಂದು ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಅವರು ಹೇಳಿದ್ದಾರೆ.

ಧೋನಿ ಅವರು ಕ್ರಿಕೆಟಿಗೆ ನಿವೃತ್ತಿ ಹೇಳಿದ ನಂತರ ಅವರ ಜಾಗವನ್ನು ಯಾರೂ ತುಂಬುತ್ತಾರೆ. ಜೊತೆಗೆ ಅವರ ರೀತಿಯ ಕೂಲ್ ಕ್ಯಾಪ್ಟನ್ ಭಾರತ ತಂಡಕ್ಕೆ ಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ಈಗ ಈ ವಿಚಾರವಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸುರೇಶ್ ರೈನಾ, ಧೋನಿ ರೀತಿಯ ನಾಯಕತ್ವದ ಗುಣಗಳು ಮತ್ತು ಶಾಂತ ಸ್ವಾಭಾವವನ್ನು ನಾನು ರೋಹಿತ್ ಅವರಲ್ಲಿ ನೋಡಿದ್ದೇನೆ ಎಂದು ಹೇಳಿದ್ದಾರೆ.

ರೋಹಿತ್ ಅವರನ್ನು ಹಾಡಿಹೊಗಳಿರುವ ರೈನಾ, ರೋಹಿತ್ ಭಾರತ ತಂಡದ ಮುಂದಿನ ಧೋನಿ. ನಾನು ರೋಹಿತ್‍ನನ್ನು ಹತ್ತಿರದಿಂದ ನೋಡಿದ್ದೇನೆ. ಆತ ಕೂಡ ಧೋನಿಯಂತೆಯೇ ಶಾಂತ ಸ್ವಾಭಾವದವನು. ಡ್ರೆಸಿಂಗ್ ರೂಮ್‍ನಲ್ಲಿ ಆತ ಬೇರೆ ಆಟಗಾರರ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಾನೆ. ಜೊತೆಗೆ ಅವರಿಗೆ ಉತ್ಸಹ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾನೆ. ಜೊತೆಗೆ ಆತ ಪಂದ್ಯಗಳನ್ನು ಮುಂದೆ ನಿಂತು ಮುನ್ನಡೆಸುತ್ತಾನೆ. ನಾಯಕ ಮುಂದೆ ನಿಂತು ಸರಿಯಾಗಿ ಲೀಡ್ ಮಾಡಿದಾಗ ಇತರ ಆಟಗಾರರಿಗೂ ಆಡಲು ಹುಮ್ಮಸ್ಸು ಬರುತ್ತದೆ ಎಂದು ರೈನಾ ತಿಳಿಸಿದ್ದಾರೆ.

ನನ್ನ ಪ್ರಕಾರ ಎಲ್ಲರಲ್ಲೂ ನಾಯಕತ್ವದ ಗುಣಗಳು ಇರುತ್ತವೆ. ಆದರೆ ನಾನೂ ಅವುಗಳನ್ನು ರೋಹಿತ್‍ನಲ್ಲಿ ನೋಡಿದ್ದೇನೆ. ಜೊತೆಗೆ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವದಲ್ಲಿ ನಾನೂ ಆಡಿದ್ದೇನೆ. ಆ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆದಿತ್ತು. ಆ ಸಮಯದಲ್ಲಿ ನಾನು ಆತನ ನಾಯಕ್ವವನ್ನು ಹತ್ತಿರದಿಂದ ನೋಡಿದ್ದೇನೆ. ಜೊತೆಗೆ ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ಅವರಂತಹ ಯುವ ಆಟಗಾರರಿಗೆ ಆತ ಹೇಗೆ ವಿಶ್ವಾಸವನ್ನು ನೀಡುತ್ತಾರೆಂದು ನಾನು ನೋಡಿದ್ದೇನೆ ಎಂದು ರೈನಾ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ತಂಡಕ್ಕೆ ವಾಪಸ್ ಆಗುವ ಬಗ್ಗೆ ಮಾತಾನಡಿರುವ ರೈನಾ, ಖಂಡಿತ ನಾನು ಮತ್ತೆ ಭಾರತ ತಂಡಕ್ಕೆ ವಾಪಸ್ ಆಗುತ್ತೇನೆ ಎಂಬ ವಿಶ್ವಾಸವಿದೆ. ಗಾಯಗಳಿಗೆ ಸಂಬಂಧಿಸಿದ ಯಾವುದೇ ಆಪರೇಷನ್ ನಂತರ ನಾನು ಹೊಸ ಆಟಗಾರನಂತೆ ಭಾವಿಸುತ್ತೇನೆ. ಕಠಿಣವಾಗಿ ಆಭ್ಯಾಸ ಮಾಡುತ್ತೇನೆ. ನಾನು ಇನ್ನೂ ಸ್ವಲ್ಪ ಕಾಲ ಭಾರತ ತಂಡದಲ್ಲಿ ಆಡಲು ಫಿಟ್ ಆಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ರೈನಾ ಹೇಳಿದ್ದಾರೆ.

ಎಂಟು ವರ್ಷ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ರೋಹಿತ್, ನಾಲ್ಕು ಬಾರಿ ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್‍ನಲ್ಲಿ 104 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಹಿಟ್‍ಮ್ಯಾನ್ 60 ಪಂದ್ಯಗಳನ್ನು ಗೆದ್ದಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತದ ನಾಯಕತ್ವ ವಹಸಿಕೊಳ್ಳುವ ಶರ್ಮಾ, 2018ರಲ್ಲಿ ನಡೆದ ನಿದಾಸ್ ಟ್ರೋಫಿ ಮತ್ತು ಏಷ್ಯಾಕಪ್‍ನಲ್ಲಿ ಭಾರತವನ್ನು ಪ್ರಶಸ್ತಿಯತ್ತ ತೆಗೆದುಕೊಂಡು ಹೋಗಿದ್ದರು. ಭಾರತ ಪರವಾಗಿ ಹತ್ತು ಏಕದಿನ ಮತ್ತು 19 ಟಿ-20 ಪಂದ್ಯಗಳನ್ನು ಮುನ್ನಡೆಸಿರುವ ರೋಹಿತ್ 8 ಏಕದಿನ ಮತ್ತು 15 ಟಿ-20 ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *