Connect with us

Bengaluru City

ರಾಜ್ಯದಲ್ಲಿ ಇಂದು 5,483 ಮಂದಿಗೆ ಕೊರೊನಾ – 84 ಮಂದಿ ಬಲಿ

Published

on

– ಬೆಂಗಳೂರಿನಲ್ಲಿ 2,220 ಮಂದಿಗೆ ಸೋಂಕು

ಬೆಂಗಳೂರು: ಕಳೆದ ದಿನ ಆರು ಸಾವಿರಕ್ಕೆ ಏರಿಕೆ ಆಗಿದ್ದ ಕೊರೊನಾ ಸೋಂಕಿತ ಸಂಖ್ಯೆ ಇಂದು 5,483 ಮಂದಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ಇಂದು ಮಂದಿ 84 ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಮಂದಿ 2,314 ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ರಾಜ್ಯದಲ್ಲಿ ಮಂದಿ ಆಸ್ಪತ್ರೆಯಿಂದ 3,130 ಡಿಸ್ಚಾರ್ಜ್ ಆಗಿದ್ದಾರೆ. 1,24,115 ಸೋಂಕಿತರ ಪೈಕಿ 72,005 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 49,788 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 609 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 22,164 ರ‍್ಯಾಪಿಡ್ ಟೆಸ್ಟ್‌ನಲ್ಲಿ 14,772 ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 36,936 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 1,47,255 ಮಂದಿಗೆ ರ‍್ಯಾಪಿಡ್ ಟೆಸ್ಟ್, 12,03,537 ಮಂದಿಗೆ ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 13,50,792 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 2,220 ಮಂದಿಗೆ ಸೋಂಕು ದೃಢವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ 2,220, ದಕ್ಷಿಣ ಕನ್ನಡ 204, ಮೈಸೂರು 204, ಬಳ್ಳಾರಿ 340, ಉಡುಪಿ 213, ಕಲಬುರಗಿ 144, ಬೆಳಗಾವಿ 217 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಒಟ್ಟು 6 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬೆಂಗಳೂರು ನಗರ 1,113, ಬಳ್ಳಾರಿ 148, ಬೆಳಗಾವಿ 88, ಉಡುಪಿ 54, ದಕ್ಷಿಣ ಕನ್ನಡ 70, ಮೈಸೂರು 302, ಕಲಬುರಗಿ 148, ದಾವಣಗೆರೆ 136, ಬೆಂಗಳೂರು ಗ್ರಾಮಾಂತರ 193, ಯಾದಗಿರಿ 237, ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *