ದುಬೈ: ರಾಜಸ್ಥಾನ್ ರಾಯಲ್ಸ್ ಬೌಲರ್ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತತ್ತರಿಸಿದ್ದು, ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುವ ಮೂಲಕ ಮುಗ್ಗರಿಸಿತು. ಈ ಮೂಲಕ ರಾಜಸ್ಥಾನಕ್ಕೆ 175 ರನ್ಗಳ ಟಾರ್ಗೆಟ್ ನೀಡಿದೆ.
Advertisement
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟಿ-20 12ನೇ ಪಂದ್ಯದ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲು ಆಟವಾಡಿ, ರಾಜಸ್ಥಾನ್ ರಾಯಲ್ಸ್ ಗೆ 175 ರನ್ಗಳ ಟಾರ್ಗೆಟ್ ನೀಡಿದೆ. ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಹಾಗೂ ಸುನೀಲ್ ನರೈನ್ ಫೀಲ್ಡಿಗಿಳಿದರು. ಗಿಲ್ 34 ಎಸೆತಕ್ಕೆಗೆ 47 ರನ್ ಗಳಿಸುವ ಮೂಲಕ ಉತ್ತಮ ಆರಂಭಿಕ ಆಟವಾಡಿದರೂ, ಅರ್ಧ ಶತಕ ವಂಚಿತರಾದರು. ಆದರೆ ನರೈನ್ 14 ಬಾಲ್ಗೆ ಕೇವಲ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Advertisement
Advertisement
ನಂತರ ನಿತೀಶ್ ರಾಣಾ ಆಗಮಿಸಿ 17 ಬಾಲ್ಗೆ 22ರನ್ ಸಿಡಿಸುವ ಮೂಲಕ ಉತ್ತಮ ಆಟವಾಡುವ ಭರವಸೆ ನೀಡಿದರೂ ನಂತರ ವಿಕೆಟ್ ಒಪ್ಪಿಸಿದರು. ದಿನೇಶ್ ಕಾರ್ತಿಕ್ ಸಹ 3 ಬಾಲ್ನಲ್ಲಿ ಕೇವಲ 1 ರನ್ ಗಳಿಸಿ ಕೀಪರ್ ಗೆ ಕ್ಯಾಚ್ ನೀಡಿದರು. ಇದರಿಂದಾಗಿ ತಂಡದ ಭರವಸೆ ಕುಗ್ಗಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಆರಂಭ ಕಂಡರೂ ರಾಜಸ್ಥಾನ ಬೌಲರ್ ಗಳ ಅಬ್ಬರಕ್ಕೆ ತತ್ತರಿಸಿತು.
Advertisement
11ನೇ ಓವರ್ ಗೆ ಆಂಡ್ರೆ ರಸಲ್ ಆಗಮಿಸಿ 3 ಸಿಕ್ಸ್ ಬಾರಿಸುವ ಮೂಲಕ ಅಬ್ಬರದ ಆಟವಾಡಿ 14 ಬಾಲ್ಗೆ 24 ರನ್ ಗಳಿಸಿ ಕ್ಯಾಚ್ ನೀಡಿದರು. ಪ್ಯಾಟ್ ಕಮ್ಮಿನ್ಸ್ ಸಹ 10 ಬಾಲ್ಗೆ 12ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಹೊರತು ಪಡಿಸಿದರೆ, ಐಯಾನ್ ಮಾರ್ಗನ್ 23 ಬಾಲ್ಗೆ 34 ರನ್ ಗಳಿಸಿದರು. ಕಮಲೇಶ್ ನಾಗರಕೋಟಿ 5 ಬಾಲ್ಗೆ 8ರನ್ ಹೊಡೆದರು. ಮಿಕ್ಕಂತೆ ಉಳೆದೆಲ್ಲ ಆಟಗಾರರು 30ಕ್ಕೂ ಹೆಚ್ಚು ರನ್ ಪೇರಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಕೋಲ್ಕತ್ತಾ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿತು.
Unadkat Vs Narine!
A catch drop, a boundary, a six and finally a wicket. The Unadkat-Narine battle was quite exciting to watch.https://t.co/SdNg24qmvI #Dream11IPL #RRvKKR
— IndianPremierLeague (@IPL) September 30, 2020
ಜೋಫ್ರಾ ಆರ್ಚರ್ 2 ವಿಕೆಟ್ ಪಡೆದು ಮಿಂಚಿದರೆ, ಅಂಕಿತ್ ರಜಪೂತ್, ಜಯದೇವ್ ಉನಾದ್ಕಟ್, ಟಾಮ್ ಕರ್ರನ್, ರಾಹುಲ್ ತೆವಾಟಿಯಾ ತಲಾ ಒಂದು ವಿಕೆಟ್ ಪಡೆದರು. ಈ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿ ಹಾಕಿದರು.