Connect with us

Chikkamagaluru

ಮಾಸ್ಕ್ ಧರಿಸಿ ಎಂದಿದ್ದಕ್ಕೆ ಪ್ರವಾಸಿಗರ ಉಡಾಫೆ ಉತ್ತರ- ಸ್ಥಳೀಯರಿಂದ ಕ್ಲಾಸ್

Published

on

ಚಿಕ್ಕಮಗಳೂರು: ಮಾಸ್ಕ್ ಹಾಕಿಕೊಳ್ಳಿ ಅಂದಿದ್ದಕ್ಕೆ ಪ್ರವಾಸಿಗರು ಉಡಾಫೆ ಉತ್ತರ ನೀಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮದಲ್ಲಿ ನಡೆದಿದೆ

ಉಡುಪಿ ಮೂಲದ ನಾಲ್ಕೈದು ಯುವಕರ ಗುಂಪು ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಶೃಂಗೇರಿಯ ನೆಮ್ಮಾರ್ ಬಳಿಯ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಫೋಟೋಶೂಟ್ ಮಾಡಿಕೊಳ್ಳುತ್ತಿದ್ದರು. ಮಾಸ್ಕ್ ಧರಿಸದೇ ಬ್ರಿಡ್ಜ್ ಬಳಿ ಓಡಾಡ್ತಾ, ಅಂಗಡಿಗೆ ಹೋಗಿ ಬರುತ್ತಿದ್ದರು. ಅಂಗಡಿಯಲ್ಲಿದ್ದ ಮಹಿಳೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಮಹಿಳೆ ಒಬ್ಬರೇ ಇದ್ದಾರೆ ಎಂದು ಯುವಕರು ಕಿರಿಕ್ ಮಾಡಿದ್ದಾರೆ. ಮಹಿಳೆ ಆಗ ಉಡುಪಿ ಮೂಲದ ಯುವಕರ ಜೊತೆ ಮಾಸ್ಕ್ ಧರಿಸಿ ಎಂದು ಗಲಾಟೆ ಮಾಡಿದ್ದಾರೆ.

ಗಲಾಟೆ ಕಂಡು ಅಕ್ಕಪಕ್ಕದ ಜನ ಬರುತ್ತಿದ್ದಂತೆ ಯುವಕರು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳೀಯ ಯುವಕರು ಬಂದು ಪ್ರವಾಸಿ ಯುವಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ತಪ್ಪಾಯ್ತು, ತಪ್ಪಾಯ್ತು ಎಂದು ಎಸ್ಕೇಪ್ ಆಗಿದ್ದಾರೆ. ಪ್ರವಾಸಿಗರು ಕಾರನ್ನ ಟರ್ನ್ ಮಾಡಿದ ರೀತಿ ಸಿನಿಮಿಯ ಮಾದರಿಯಲ್ಲಿತ್ತು. ಕಾರಿನ ಹಿಂಭಾಗ ಯಾರಾದ್ರು ಇದ್ದಿದ್ರೆ ಏನಾದ್ರು ಒಂದು ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಏನೂ ಆಗಿಲ್ಲ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click to comment

Leave a Reply

Your email address will not be published. Required fields are marked *