BollywoodCinemaLatestMain Post

ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

-ದೀಪಿಕಾ ವಾಟ್ಸಪ್ ಚಾಟ್ ಔಟ್
-ಈ ವಾರ ಮಸ್ತಾನಿಗೆ ಎನ್‍ಸಿಬಿ ನೋಟಿಸ್?

ಮುಂಬೈ: ಡ್ರಗ್ಸ್ ನಶೆಯಲ್ಲಿ ಬಾಲಿವುಡ್ ಬೆಡಗಿ, ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿದ್ದು, ಈ ವಾರ ಗುಳಿಕೆನ್ನೆ ಚೆಲುವೆಗೆ ಎನ್‍ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್‍ಶಾಟ್ ಗಳು ರಿವೀಲ್ ಆಗಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆಯ ಘಾಟಿನ ಸುಳಿವು ನೀಡಿದೆ. ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ. ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕಲಿಯಬಾರದ ಚಟವನ್ನ ಕಲಿತು, ಮಾಡಬಾರದ ಅನಿಷ್ಟಗಳನ್ನ ಮಾಡಿದ್ದೇನೆ: ಯೋಗಿ

ವಾಟ್ಸಪ್ ಸಂಭಾಷಣೆ:
ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?
ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.
ದೀಪಿಕಾ: ಯೆಸ್, ಪ್ಲೀಸ್
ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.
ದೀಪಿಕಾ: ಹ್ಯಾಶ್ ತಾನೇ? ವೀಡ್ ಅಲ್ಲವಲ್ಲಾ?
ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್‍ಗೆ ಹೇಳುತ್ತೇನೆ.

ಹೀಗೆ ಈ ಸಂಭಾಷಣೆ ಮುಂದುವರಿಯುತ್ತದೆ. ದೀಪಿಕಾ ತಮಗೆ ಮಾಲ್ ತಲುಪಿಸುವ ಸಮಯದ ಬಗ್ಗೆಯೂ ಹೇಳುತ್ತಾರೆ. ಈ ಚಾಟ್ ವೇಳೆ ಶಾಲ್ ಎಂಬಾತನ ಹೆಸರು ಬರುತ್ತದೆ. ಚಾಟ್ ರಿವೀಲ್ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿ ರಿವೀಲ್ ಆಗಿದೆ. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಲಿದೆ ಎನ್ನಲಾಗಿದೆ. ವಿಚಾರಣೆ ವೇಳೆ ರಿಯಾ ಚಕ್ರವರ್ತಿ ನಾಲ್ವರ ಹೆಸರು ಹೇಳಿದ್ದಾರೆ ಎಂದು ಹೇಳಲಾಗಿದೆ. ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

ಇಂದು ಜಯ್ ಸಾಹಾ, ಕರೀಷ್ಮಾ ಮತ್ತು ಸುಶಾಂತ್ ಮ್ಯಾನೇಜರ್ ಶೃತಿ ಮೋದಿಯನ್ನ ಎನ್‍ಸಿಬಿ ವಿಚಾರಣೆ ನಡೆಸಲಿದೆ. ಈ ಮೂವರ ವಿಚಾರಣೆಯಲ್ಲಿ ಮತ್ತಷ್ಟು ಹೆಸರುಗಳು ಹೊರ ಬರುವ ಸಾಧ್ಯತೆಗಳಿವೆ. ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇದನ್ನೂ ಓದಿಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

Leave a Reply

Your email address will not be published.

Back to top button