Connect with us

Bollywood

ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

Published

on

ಮುಂಬೈ: ಈ ವಾರ ಬಾಲಿವುಡ್ ತಾರೆಯರಾದ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಭಾಟಾರಿಗೆ ಸಮನ್ಸ್ ನೀಡಲು ಎನ್‍ಸಿಬಿ ಸಿದ್ಧತೆ ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಲಿದೆ ಎನ್ನಲಾಗಿದೆ. ವಿಚಾರಣೆ ವೇಳೆ ರಿಯಾ ಚಕ್ರವರ್ತಿ ನಾಲ್ವರ ಹೆಸರು ಹೇಳಿದ್ದಾರೆ ಎಂದು ಹೇಳಲಾಗಿದೆ. ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

ತನ್ನ ಪರಿಚಯಕ್ಕೂ ಮೊದಲು ಸುಶಾಂತ್ ಗಾಂಜಾ ಸೇವನೆ ಮಾಡ್ತಿದ್ದರು. ಕೇದಾರನಾಥ್ ಚಿತ್ರೀಕರಣ ವೇಳೆಯೂ ಸುಶಾಂತ್ ಹೆಚ್ಚು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಡ್ರಗ್ಸ್ ತೆಗೆದುಕೊಳ್ಳುವದರಿಂದ ಹೆಚ್ಚು ಹಸಿವು ಆಗುತ್ತದೆ. ಕೇದಾರನಾಥ್ ಸಿನಿಮಾ ಬಳಿಕ ಸುಶಾಂತ್ ಮತ್ತು ಸಾರಾ ತೂಕ ಹೆಚ್ಚಾಗಿತ್ತು ಎಂದು ರಿಯಾ ವಿಚಾರಣೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್- ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

ಸದ್ಯ ಈ ನಾಲ್ವರಿಗೂ ಎನ್‍ಸಿಬಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಎಲ್ಲ ಕಾನೂನು ರೀತಿಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಸುಶಾಂತ್ ಒಡೆತನದ ಲೋನಾವಾಲಾ ಫಾರ್ಮ್‍ಹೌಸ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಈ ನಾಲ್ವರು ಭಾಗಿಯಾಗುತ್ತಿದ್ದರಂತೆ. ಸುಶಾಂತ್ ಫಾರ್ಮ್‍ಹೌಸ್ ನಲ್ಲಿ ಗಾಂಜಾ ಸೇವನೆಗೆ ಬಳಸಲಾಗುವ ಕೆಲ ವಸ್ತುಗಳ ಸಹ ಲಭ್ಯವಾಗಿವೆ. ಇದನ್ನೂ ಓದಿ: ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಡ್ರಗ್ಸ್ ಆಯಾಮವನ್ನ ಪಡೆದುಕೊಂಡಿದ್ದರಿಂದ ಎನ್‍ಸಿಬಿ ತನಿಖೆಗೆ ಇಳಿದಿತ್ತು. ತನಿಖೆಯ ಆಳಕ್ಕೆ ಹೋದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಹೆಸರು ಮುನ್ನಲೆಗೆ ಬರುತ್ತಿವೆ. ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಆತನ ಇಬ್ಬರ ಸಹಚರರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

ಹೈಕೋರ್ಟ್ ಮೊರೆ ಹೋದ ರಕುಲ್: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತನ್ನ ಹೆಸರು ಪ್ರಕಟಣೆಗೆ ತಡೆ ನೀಡಬೇಕೆಂದು ಕೋರಿ ನಟಿ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಮಾಧ್ಯಮಗಳು ರಿಯಾ ಚಕ್ರವರ್ತಿ ಹೇಳಿಕೆಯನ್ನು ಆಧಾರಿಸಿ ಡ್ರಗ್ಸ್ ಪ್ರಕರಣದಲ್ಲಿ ತನ್ನ ಕಕ್ಷಿದಾರರ ಹೆಸರನ್ನು ಪ್ರಕಟಿಸುತ್ತಿವೆ. ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿರುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಕುಲ್ ಪರ ವಕೀಲರು ಮನವಿ ಮಾಡಿದ್ದರು. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

ನ್ಯಾ.ನವೀನ್ ಚಾವ್ಲಾ ಅವರಿದ್ದ ಏಕಸದಸ್ಯ ಪೀಠದಲ್ಲಿ ಇಂದು ರಾಕುಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ರಾಕುಲ್ ಪರ ವಕೀಲರು, ಡ್ರಗ್ಸ್ ಪ್ರಕರಣದಲ್ಲಿ ರಾಕುಲ್‍ಗೆ ಸಂಬಂಧವಿದೆ ಎಂದು ದುರುದ್ದೇಶಪೂರ್ವಕವಾಗಿ ಸುದ್ದಿ ಪ್ರಸಾರವಾಗಿದೆ. ಯಾವುದೋ ಫೋಟೋ, ವಿಡಿಯೋಗಳಿಗೆ ಡ್ರಗ್ಸ್ ಪ್ರಕರಣವನ್ನು ಜೋಡಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸಂವಿಧಾನ ಪರಿಚ್ಛೇದ 21ರ ಅಡಿ ಬರುವ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಸುದ್ದಿ ಪ್ರಸಾರ ಸಂಘಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.

Click to comment

Leave a Reply

Your email address will not be published. Required fields are marked *