Connect with us

Corona

ಮಹಾರಾಷ್ಟ್ರ ಸಚಿವ ಅಸ್ಲಂ ಶೇಕ್‍ಗೆ ಕೊರೊನಾ ಪಾಸಿಟಿವ್

Published

on

ಮುಂಬೈ: ಮಹಾರಾಷ್ಟ್ರ ಸಚಿವ,ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಇಂದು ಬೆಳಗ್ಗೆ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ, ಸಚಿವರಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಅವರು ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನನಗೆ ಕೋವಿಡ್ 19 ಟೆಸ್ಟ್ ವರದಿ ಪಾಸಿಟಿವ್ ಎಂದು ಬಂದಿದೆ. ಲಕ್ಷಣ ರಹಿತ ಕೊರೊನಾ ಸೋಂಕು ಅಂಟಿದ್ದರಿಂದ ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ರೋ ಅವರೆಲ್ಲರೂ ಈ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಕೂಡ ಮಡಿಕೊಂಡಿದ್ದಾರೆ. ಅಲ್ಲದೆ ಮನೆಯಲ್ಲಿಯೇ ಕುಳಿತು ನಾನು ನನ್ನ ರಾಜ್ಯದ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇದೀಗ 4ನೇ ಸಚಿವರಿಗೆ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಇದಕ್ಕೂ ಮೊದಲು ಜಿತೇಂದ್ರ ಆವಾಡ್, ಧನಂಜಯ್ ಮುಂಡೆ ಹಾಗೂ ಅಶೋಕ್ ಚೌಹ್ಹಾಣ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಸದ್ಯ ಎಲ್ಲರೂ ಗುಣಮುಖರಾಗಿದ್ದಾರೆ.

Click to comment

Leave a Reply

Your email address will not be published. Required fields are marked *