Advertisements

ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು: ರಾಮ್ ಗೋಪಾಲ್ ವರ್ಮಾ

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಹಾಗೂ ನಾಗಚೈತನ್ಯ ಇಂದು ತಾವು ವಿಚ್ಛೇದನ ಪಡೆದುಕೊಳ್ಳುವುದಾಗಿ ಅಧಿಕೃತವಾಗಿ ತಿಳಿಸಿದ್ದು, ಈ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮದೇ ಸ್ಟೈಲಿನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Advertisements

ಹೌದು. ಇಂದು ನಟ ಹಾಗೂ ನಟಿ ಡಿವೋರ್ಸ್ ನೀಡುತ್ತಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರಾಮ್ ಗೋಪಾಲ್ ವರ್ಮಾ ಅವರು, ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ವಿಚ್ಚೇದನವನ್ನು ಸಂಭ್ರಮಿಸಬೇಕು ಅನ್ನೋ ನಿರ್ದೇಶಕರ ಟ್ವೀಟ್ ಗಳು ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:  ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

Advertisements

ಇತ್ತೀಚೆಗೆ ಮದುವೆಗಳನ್ನು ಅಲ್ಲ, ಬದಲಾಗಿ ಡಿವೋರ್ಸ್‍ಗಳನ್ನು ಸಂಭ್ರಮಿಸಬೇಕಾದ ಪರಿಸ್ಥಿತಿ ಬಂದಿದೆ. ಮದುವೆಗಳು ಸಾವಿದ್ದಂತೆ, ಡಿವೋರ್ಸ್ ಪುನರ್ಜನ್ಮ ಇದ್ದಂತೆ. ಮದುವೆಗಳು ನರಕದಲ್ಲಿ ಹಾಗೂ ಡಿವೋರ್ಸ್ ಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೇ ಎಂದು ತಮ್ಮದೇ ಶೈಲಿಯಲ್ಲಿ ನಿರ್ದೇಶಕರು ಬರೆದುಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಆರ್‍ಜಿವಿ ಟ್ವೀಟ್ ಗೆ ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಹರಿದು ಬಂದಿವೆ.

Advertisements

4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸ್ಟಾರ್ ಜೋಡಿ ಇಂದು ಅಧಿಕೃತವಾಗಿ ತಮ್ಮ ಡಿವೋರ್ಸ್ ವಿಚಾರ ಬಹಿರಂಗಪಡಿಸುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ. ನಮ್ಮ ಖಾಸಗಿ ಬದುಕನ್ನು ಎಲ್ಲರೂ ಗೌರವಿಸಿ. ಇಂತಹ ಸಂದರ್ಭಗಳಲ್ಲಿ ನಮ್ಮ ಜೊತೆ ನಿಲ್ಲಿ ಎಂದು ಅಭಿಮಾನಿಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮನವಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

ಇತ್ತ ತಮ್ಮ ಸೊಸೆ ಹಾಗೂ ಪುತ್ರನ ದಾಂಪತ್ಯದಲ್ಲಿ ಬಿರುಕು ಮೂಡಿದ್ದರ ಕುರಿತು ಬೇಸರ ವ್ಯಕ್ತಪಡಿಸಿರುವ ನಾಗಾರ್ಜುನ್, ಅತ್ಯಂತ ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ. ಸ್ಯಾಮ್ ಮತ್ತು ಚಾಯ್ ನಡುವೆ ನಡೆದದ್ದು ತುಂಬಾ ದುರದೃಷ್ಟಕರವಾಗಿದೆ. ದಂಪತಿ ಮಧ್ಯೆ ಏನಾಗುತ್ತಿದೆ ಎನ್ನುವುದು ತುಂಬಾ ವೈಯಕ್ತಿಕವಾಗಿದೆ. ಇಬ್ಬರು ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ಗೌರವಿಸುತ್ತದೆ. ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ. ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಬೇಸರ ಹೊರಹಾಕಿದ್ದಾರೆ.

Advertisements
Exit mobile version