CinemaLatestMain PostNationalSouth cinema

ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

ಹೈದರಾಬಾದ್: ಸೊಸೆ ಸಮಂತಾ ಅಕ್ಕಿನೇನಿ ಮತ್ತು ಮಗ ನಾಗಚೈತನ್ಯ ವಿಚ್ಛೇದನದ ವಿಚಾರವಾಗಿ ನಾಗಾರ್ಜುನ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಭಾರವಾದ ಹೃದಯದಿಂದ, ನಾನು ಇದನ್ನು ಹೇಳುತ್ತೇನೆ, ಸ್ಯಾಮ್ ಮತ್ತು ಚಾಯ್ ನಡುವೆ ನಡೆದದ್ದು ತುಂಬಾ ದುರದೃಷ್ಟಕರವಾಗಿದೆ. ದಂಪತಿ ಮಧ್ಯೆ ಏನಾಗುತ್ತಿದೆ ಎನ್ನುವುದು ತುಂಬಾ ವೈಯಕ್ತಿಕವಾಗಿದೆ. ಇಬ್ಬರು ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ಗೌರವಿಸುತ್ತದೆ. ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ. ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಗ ಮತ್ತು ಸೊಸೆ ದೂರವಾಗುತ್ತಿರುವ ಕುರಿತಾಗಿ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:  ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

2017ರಲ್ಲಿ ಮದುವೆಯಾದ ನಟಿ ಸಮಂತಾ ಮತ್ತು ಅಕ್ಕಿನೇನಿ ನಾಗ ಚೈತನ್ಯ ಅವರ ಸಂಸಾರದಲ್ಲಿ ಈಗ ಏನೋ ಕಿರಿಕ್ ಎದುರಾಗಿದೆ ಎಂಬ ಅನುಮಾನ ಕೆಲವು ದಿನಗಳ ಹಿಂದೆ ಮೂಡಿತ್ತು. ಆ ಅನುಮಾನಕ್ಕೆ ಪೂರಕ ಆಗುವಂತಹ ಅನೇಕ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದವು. ಇಂದು ಇಬ್ಬರು ತಾವು ದೂರವಾಗುತ್ತಿರುವುದು ನಿಜ ಎಂದು ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿಕೊಂಡಿದ್ದಾರೆ. ಸೊಸೆ ಕುಟುಂಬದಿಂದ ದೂರವಾಗುತ್ತಿರುವ ಕುರಿತಾಗಿ ನಾಗಾರ್ಜುನ್ ಅವರು ಭಾರದ ಮನಸ್ಸಿನಿಂದ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

 

View this post on Instagram

 

A post shared by S (@samantharuthprabhuoffl)

ಕೆಲವು ದಿನಗಳ ಹಿಂದೆ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಎಂಬ ಸರ್‍ನೇಮ್ ಅನ್ನು ತೆಗೆದು ಹಾಕಿದ್ದರು. ಇದಾದ ಬಳಿಕ ಇಬ್ಬರ ದಾಂಪತ್ಯದ ಬಗ್ಗೆ ಅಭಿಮಾನಿಗಳಲ್ಲಿ ಸಂಶಯ ಹುಟ್ಟಿಕೊಂಡಿತ್ತು. ಆ ಬಗ್ಗೆ ಕುಟುಂಬದವರು ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಂತಾ, ನಾಗ ಚೈತನ್ಯ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇಂದು ಕೊನೆ ಹಾಡಿದ್ದಾರೆ. ತಾವು ವಿಚ್ಛೇದನ ಪಡೆದುಕೊಳ್ಳುತ್ತಿರುವ ಕುರಿತಾಗಿ ತಿಳಿಸಿದ್ದಾರೆ.

Leave a Reply

Your email address will not be published.

Back to top button