ಮೈಸೂರು: ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತ ಕಾಂಗ್ರೆಸ್‍ನವರಿಗೆ ಗೊತ್ತಿದೆ. ಯಾಕೆಂದರೆ ಆ ಬಿಲ ಸೃಷ್ಟಿ ಮಾಡಿದವರೆ ಕಾಂಗ್ರೆಸಿಗರು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್‍ನ ಲೆಕ್ಕ ಕೇಳಿ ಅಭಿಯಾನಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಂಗೇ ಪಾಠ ಹೇಳಿಕೊಡೋದಾ?, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿದ್ದಾರೆ: ಸಿದ್ದು
Advertisement
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಈ ಕೋವಿಡ್ ಸಂದರ್ಭದಲ್ಲಿ ಲೆಕ್ಕ ಕೊಡಿ ಎನ್ನುವುದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ಲೆಕ್ಕ ನೋಡಿಕೊಂಡು ಹೋಗಿ ಎಂದಾಗ ಅವರೇ ಹೋಗಿ ನೋಡಿಲ್ಲ. ಈಗ ಪ್ರತಿದಿನ ಸುದ್ದಿಗೋಷ್ಠಿ ಕರೆಯುವುದು, ರಾಜಕಾರಣ ಮಾಡುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ಸಹಕಾರ ಕೊಡಿ. ಮುಂದೆ ಅಧಿವೇಶನ ಬರುತ್ತೆ. ಆಗ ಸರಿಯಾದ ಲೆಕ್ಕವನ್ನು ಆಧಾರದ ಸಮೇತ ಕೊಡುತ್ತೇವೆ ಎಂದರು. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ
Advertisement
Advertisement
ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತ ಕಾಂಗ್ರೆಸ್‍ನವರಿಗೆ ಗೊತ್ತಿದೆ. ಯಾಕೆಂದರೆ ಆ ಬಿಲ ಸೃಷ್ಟಿ ಮಾಡಿದವರೆ ಕಾಂಗ್ರೆಸಿಗರು. ಎಲ್ಲಿ ಹೇಗೆ ಭ್ರಷ್ಟಾಚಾರ ಮಾಡಬಹುದು ಎಂಬುದು ಅವರಿಗೆ ಚೆನ್ನಾಗಿ ಅನುಭವವಿದೆ. ಇದೇ ಅನುಭವ ಇಟ್ಟುಕೊಂಡು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಲಿ. ಈಗ ಸೋಂಕಿತರ ಜೀವ ಉಳಿಸುವ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್‍ನ ಲೆಕ್ಕ ಕೇಳಿ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
Advertisement
ಲೆಕ್ಕ ಕೇಳ ಬೇಡಿ ಅಂತ ಯಾರೂ ಹೇಳಿಲ್ಲ. ಆದರೆ ಲೆಕ್ಕ ಎಲ್ಲೂ ಹೋಗಲ್ಲ, ಸದನ ಕರೆದಾಗ ಲೆಕ್ಕ ಕೊಡುತ್ತೇವೆ. ಇದು ಸರ್ಕಾರಕ್ಕೆ ಸಹಕಾರ ಕೊಡುವ ಸಮಯ, ಲೆಕ್ಕ ಕೇಳುವ ಸಮಯವಲ್ಲ. ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಪ್ರತಾಪ್ ಸಿಂಹ ಹೇಳಿದರು.