ಬಿಜೆಪಿ ಗೆದ್ದರೆ ಸಿಎಂ ಸ್ಥಾನ ಅಲಂಕರಿಸಲು ಸಿದ್ಧ: ಮೆಟ್ರೋಮ್ಯಾನ್ ಶ್ರೀಧರನ್

Advertisements

ತಿರುವನಂತಪುರಂ: ಕೊಂಕಣ ರೈಲಿನ ಸೂತ್ರಧಾರನಾಗಿ ದೇಶಕ್ಕೆ ಪರಿಚಯವಾದ ಮೆಟ್ರೋ ಮ್ಯಾನ್ ಖ್ಯಾತಿಯ ಇ ಶ್ರೀಧರನ್ ಬಿಜೆಪಿ ಪಕ್ಷಕ್ಕೆ ಸೇರಲು ಸಿದ್ಧವಾಗಿದ್ದು. ಇದೀಗ ಸೇರ್ಪಡೆಯಾಗುವ ಮುನ್ನವೇ ತಾನು ಸಿಎಂ ಸ್ಥಾನ ಅಲಂಕರಿಸಲು ಸಿದ್ಧವಿರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶ್ರೀಧರನ್ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಫೆ. 21ರಂದು ಕಾಸರಗೋಡಿನಲ್ಲಿ ನಡೆಯುವ ‘ವಿಜಯ ಯಾತ್ರೆ’ ಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕೇರಳದಲ್ಲಿ ಏಪ್ರಿಲ್-ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂದರೆ ನಾನೂ ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಲು ಸಿದ್ಧವಾಗಿರುವುದಾಗಿ ಮನದಾಸೆ ಬಿಚ್ಚಿಟ್ಟಿದ್ದಾರೆ.

Advertisements

ಕೇರಳ ರಾಜ್ಯದ ಸಮಸ್ತ ಅಭಿವೃದ್ಧಿ ಕಾರ್ಯಗಳಿಗಾಗಿ ನನ್ನ ಬಳಿ ಹಲವು ಯೋಜನೆಗಳಿದ್ದು, ಕೈಗಾರಿಕೆ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುದಾಗಿ ಆಶ್ವಾಸನೆ ನೀಡಿದ್ದಾರೆ.

Advertisements

ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಹೊಂದಿರುವ ಶ್ರೀಧರನ್ ಇದೀಗ ಕೇರಳ ರಾಜ್ಯದ ಮೊದಲ ಪ್ರಜೆಯಾಗಿ ಗುರುತಿಸಿಕೊಳ್ಳಲು ಸಿದ್ಧ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

Advertisements
Exit mobile version