ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ರಿಯಾಲಿಟಿ ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬಿಗ್ಬಾಸ್ ಸೀಸನ್ 8ರ ಪ್ರೋಮೋ ಟ್ವೀಟ್ ಮಾಡುವ ಮೂಲಕ ಸಿಹಿ ಹಂಚಿದ್ದಾರೆ.
#BigBossSeason8
Get ready for another 100 entertaining days. https://t.co/Lnrb8jcm1Z
— Kichcha Sudeepa (@KicchaSudeep) January 28, 2021
ಕೆಲ ದಿನಗಳ ಹಿಂದೆ ಪ್ರೋಮೋ ಶೂಟ್ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದ ಕಿಚ್ಚ, ಬಿಗ್ ಬಾಸ್ ಸೀಸನ್ 8ರ ಪ್ರೊಮೋ ನಡೆಯುತ್ತಿದೆ. ಸದ್ಯದಲ್ಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಬರೆದುಕೊಂಡಿದ್ದರು.
ಇದೀಗ ಪ್ರೋಮೋ ಖಾಸಗಿ ವಾಹಿನಿ ಹೊರಬಿಟ್ಟಿದ್ದು, ಕಿಚ್ಚ ಅದನ್ನು ರೀ ಟ್ವೀಟ್ ಮಾಡಿ ಬಿಗ್ಬಾಸ್ ಕನ್ನಡ ಸೀಸನ್-8 ಬರ್ತಿದೆ. ನೀವು ಮುಂದಿನ 100 ದಿನದ ಮನರಂಜನೆಗಾಗಿ ತಯಾರಾಗಿ ಎಂದು ಬರೆದುಕೊಂಡಿದ್ದಾರೆ.
Tnx to all for luving and sharing ydays announcement.#VikrantRonaOnBurjKhalifa
___________________________
BigBoss season 8 soon.
Promo shoot in progress pic.twitter.com/lyBBSenH2B
— Kichcha Sudeepa (@KicchaSudeep) January 22, 2021
ಪ್ರೋಮೋದಲ್ಲಿ ಜೆರಾಕ್ಸ್ ಮಾಡಲು ಸುದೀಪ್ ಹೇಳುವಾಗ ಜೆರಾಕ್ಸ್ ಪೇಪರ್ ನಲ್ಲಿ ಪದೇ ಪದೇ 8 ಎಂಬ ಬರವಣಿಗೆ ಕಾಣಿಸುತ್ತದೆ. ನಂತರ ಕಿಚ್ಚ ಇದು ಸೀಸನ್ 8ರ ಬಗ್ಗೆ ಯೋಚಿಸುವ ಸಣ್ಣ ಟ್ವಿಸ್ಟ್ ನೀಡಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುವ ಸನ್ನಿವೇಶ ಇದೆ.