ಫೆ.28ರಿಂದ ಬಿಗ್ ಬಾಸ್ ಹವಾ ಶುರು- ಸಂಜೆ 6ಕ್ಕೆ ಚಾಲನೆ

Public TV
2 Min Read
BIGBOSS

ಬೆಂಗಳೂರು: ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಫೆ.28 ರಂದು ಸಂಜೆ 6 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಎಂದಿನಂತೆ ಕಿಚ್ಚ ಸುದೀಪ್ ಕಾರ್ಯಕ್ರವನ್ನು ನಿರೂಪಿಸಲಿದ್ದಾರೆ.

ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ ಹೊಸ ಟೀಸರ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ 100 ದಿನಗಳ ಕಾಲ ನಡೆಯಲಿರುವ ಜನಪ್ರಿಯ ಬಿಗ್ ಬಾಸ್ ಶೋವನ್ನು ಅವರೇ ನಡೆಸಿಕೊಡಲಿದ್ದಾರೆ ಎಂದು ಘೋಷಿಸಲಾಗಿದೆ. ಫೆಬ್ರವರಿ 29ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಬಿಗ್ ಬಾಸ್ ಪ್ರಸಾರವಾಗಲಿದ್ದು, ಯಾವ ಸಮಯ ಎಂಬುದರ ಕುರಿತು ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ರಾತ್ರಿ 8ರಿಂದ ಪ್ರಸಾರವಾಗುವ ಸಾಧ್ಯತೆ ಇದೆ.

EuAmMKwU0AEFJ0X e1613445473982

ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ರಿಯಾಲಿಟಿ ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇತ್ತೀಚೆಗೆ ಕಿಚ್ಚ ಸುದೀಪ್ ಹೊಸ ಜೋಯಿಸರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಗ್ ಬಾಸ್ ಕುರಿತು ಸುಳಿವು ನೀಡಿದ್ದರು.

ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಖಾಸಗಿ ವಾಹಿನಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಿಚ್ಚ ಅವರ ಹೊಸ ಫೋಟೋವನ್ನು ಹಂಚಿಕೊಂಡು ಇನ್ನೊಂದು ಸುದ್ದಿಯನ್ನು ಹಂಚಿಕೊಂಡಿದ್ದರು. ಸುದೀಪ್ ಜೋಯಿಸರ ಅವರತಾರದಲ್ಲಿರುವ ಫೋಟೋವನ್ನು ಹಂಚಿಕೊಂಡು ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‍ನಲ್ಲಿ ಹೇಳಿ ಎಂದು ಬರೆದು ಬಿಗ್ ಬಾಸ್ ತಂಡದಿಂದ ಹೊಸ ಮಾಹಿತಿಯನ್ನು ಹೊರಹಾಕಿದ್ದರು.

BIGG BOSS

ಪ್ರತಿ ಸೀಸನ್‍ನಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಸುದೀಪ್ ಇದೀಗ ಜೋಯಿಸರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ.

ಈಗಾಗಲೇ ಸಾಕಷ್ಟು ಅಭಿಮಾನಿಗಳು ಬಿಗ್‍ಬಾಸ್ ಸೀಸನ್ 8 ಗಾಗಿ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ತಂಡ ದಿನಕ್ಕೊಂದು ಮಾಹಿತಿಯನ್ನು ನೀಡುತ್ತಾ ಎಲ್ಲರ ಕೌತುಕವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಸೀಸನ್ 8ಕ್ಕೆ ಯಾವೆಲ್ಲ ಸೆಲೆಬ್ರಿಟಿಗಳು ಹೋಗಬಹುದು ಎಂಬ ಕುರಿತಾಗಿ ನಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಹೆಸರುಗಳನ್ನು ಸಹ ಹೇಳುತ್ತಿದ್ದಾರೆ.

Bigg Boss

ಕೆಲ ದಿನಗಳ ಹಿಂದೆ ಪ್ರೋಮೋ ಶೂಟ್‍ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಬಿಗ್ ಬಾಸ್ ಸೀಸನ್ 8ರ ಪ್ರೋಮೋ ನಡೆಯುತ್ತಿದೆ. ಸದ್ಯದಲ್ಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಸುದೀಪ್ ಬರೆದುಕೊಂಡಿದ್ದರು. ಕೆಲವು ದಿನಗಳ ನಂತರ ಖಾಸಗಿ ವಾಹಿನಿ ಪ್ರೋಮೋ ಹೊರಬಿಟ್ಟಿದ್ದು, ಕಿಚ್ಚ ಅದನ್ನು ರೀ ಟ್ವೀಟ್ ಮಾಡಿ ಬಿಗ್‍ಬಾಸ್ ಕನ್ನಡ ಸೀಸನ್-8 ಬರ್ತಿದೆ. ನೀವು ಮುಂದಿನ 100 ದಿನದ ಮನರಂಜನೆಗಾಗಿ ತಯಾರಾಗಿ ಎಂದು ಬರೆದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟು ನೀರಿಕ್ಷೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಿದ್ದರು.

Share This Article