ದುಬೈ: ಪ್ರಿಯತಮೆಗೆ ಊಡುಗೊರೆ ನೀಡಲು ಒಂಟೆ ಮರಿ ಕದ್ದ ಪ್ರೇಮಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ದುಬೈ ಕಾನೂನಿನ ಪ್ರಕಾರ ಒಂಟೆಯನ್ನು ಕದ್ದರೆ ಅಪರಾಧವಾಗಿದೆ. ಈ ತಪ್ಪಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಹೀಗಿರುವಾಗ ಒಂಟೆ ಕದ್ದು ಊಡುಗೊರೆ ನೀಡಲು ಮುಂದಾದ ಪ್ರೇಮಿಯೊಬ್ಬ ಜೈಲು ಸೇರಿದ್ದಾನೆ.
Advertisement
Advertisement
ಪ್ರಿಯತಮೆಯ ಜನ್ಮದಿನಕ್ಕೆ ಏನಾದರೂ ವಿಶೇಷವಾದ ಊಡುಗೊರೆಯನ್ನು ನೀಡಬೇಕು ಎಂದು ಯೋಚಿಸಿದ ಪ್ರೇಮಿ ಕಣ್ಣಿಗೆ ಕಂಡಿದ್ದು ಒಂಟೆ ಮರಿ. ಸರಿಸುಮಾರು 3 ಕಿಮೀ ದೂರದ ಊರಿನಲ್ಲಿ ಕೆಲವು ದಿನಗಳ ಹಿಂದೆ ಒಂಟೆ ಮರಿ ಹುಟ್ಟಿರುವ ವಿಚಾರ ತಿಳಿದಿದೆ. ಇದನ್ನು ಕದ್ದು ಪ್ರಿಯತಮೆಗೆ ನೀಡಿದ್ದಾನೆ. ಇತ್ತ ಒಂಟೆ ಮರಿ ಕಳೆದುಕೊಂಡಿರುವ ಮಾಲೀಕರು ಹುಡುಕಲು ಪ್ರಾರಂಭಿಸಿದ್ದಾರೆ. ಒಂಟೆ ಮರಿ ಸಿಗದೆ ಇದ್ದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ಈ ವಿಚಾರವಾಗಿ ಭಯಗೊಂಡ ಪ್ರೇಮಿ ಪೊಲೀಸರ ಕೈಗೆ ಸಿಕ್ಕಿ ಬಿಳುತ್ತೇನೆ ಎಂಬ ಭಯದಿಂದ ನನ್ನ ಜಮೀನಿಗೆ ಒಂದು ಒಂಟೆ ಮರಿ ಬಂದಿದೆ, ಕಟ್ಟಿ ಹಾಕಿದ್ದೇನೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಅನುಮಾನಗೊಂಡು ವಿಚಾರಿಸಿದಾಗ ಒಂಟೆ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಿಯತಮೆಗೆ ನೆನೆಪಿನ ಕಾಣಿಕೆ ಕೊಡಲು ಹೊಗಿ ಜೈಲು ಸೇರಿದ್ದಾನೆ.