ಇಸ್ಲಾಮಾಬಾದ್: ನೆರೆಯ ದುಷ್ಟ ಪಾಕಿಸ್ತಾನ 20 ತಿಂಗಳ ತಾನು ಎಸಗಿದ ಘೋರಕೃತ್ಯವನ್ನ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯ ತಮ್ಮ ಸಮುದಾಯ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಖಾನ್ ಸಂಸತ್ ನಲ್ಲಿಯೇ ಹೇಳಿಕೆ ನೀಡಿದ್ದಾರೆ.
Advertisement
ಇಂದು ಮುಸ್ಲಿಂ ಲೀಗ್ ಎನ್ ಪಕ್ಷದ ನೇತಾರ ಅಯಾಜ್ ಸಾದಿಕ್ ಪ್ರಶ್ನೆಗೆ ಫವಾದ್ ಖಾನ್ ಉತ್ತರಿಸುತ್ತಿದ್ದರು. ಭಾರತ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವಶಕ್ಕೆ ಪಡೆದ ವೇಳೆ ವಿದೇಶಾಂಗ ಸಚಿವ ಖುರೇಷಿ ಭಯಗೊಂಡಿದ್ದರು. ಆರ್ಮಿ ಚೀಫ್ ಹಣೆಯ ಮೇಲೆ ಬೆವರು ಇತ್ತು, ಅವರ ಕಾಲುಗಳು ನಡಗುತ್ತಿದ್ದವು ಎಂದು ಸಾದಿಕ್ ಹೇಳಿದ್ದರು. ಇದನ್ನೂ ಓದಿ: ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ
Advertisement
Advertisement
ಸಾದಿಕ್ ಪ್ರಶ್ನೆಗೆ ಉತ್ತರಿಸಿದ ಫವಾದ್, ನಾನು ಹಿಂದೂಸ್ಥಾನದೊಳಗೆ ನುಗ್ಗಿ ದಾಳಿ ನಡೆಸಿದ್ದೇವೆ. ಪುಲ್ವಾಮಾ ದಾಳಿಯಲ್ಲಿ ಸಿಕ್ಕ ಯಶಸ್ಸು, ಇಮ್ರಾನ್ ಖಾನ್ ಆದೇಶದಿಂದ ಲಭ್ಯವಾಗಿರೋದು. ಇದು ನಮ್ಮ ಸಮುದಾಯದ ಯಶಸ್ಸು. ಆ ಯಶಸ್ಸಿನಲ್ಲಿ ನಾವು ಮತ್ತು ನೀವು ಭಾಗಿಯಾಗಲು ಸಿಕ್ಕ ಅವಕಾಶ ಹೆಮ್ಮೆ ವಿಷಯ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ- ಒಂದು ಮೊಬೈಲ್‍ನಿಂದ ಇಡೀ ಕೃತ್ಯದ ಮಾಹಿತಿ ಬಹಿರಂಗ
Advertisement
Congress’ princeling does not believe anything Indian, be it our Army, our Government, our Citizens. So, here is something from his ‘Most Trusted Nation’, Pakistan. Hopefully now he sees some light… pic.twitter.com/shwdbkQWai
— Jagat Prakash Nadda (@JPNadda) October 29, 2020
ಅಂದು ಏನಾಗಿತ್ತು?
ಕಳೆದ ವರ್ಷದ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ
ಸೇನಾ ಮುಖ್ಯಸ್ಥರ ಕಾಲು ನಡುಗುತ್ತಿತ್ತು- ಅಭಿನಂದನ್ ಬಿಡುಗಡೆಯ ಕಾರಣ ಬಿಚ್ಚಿಟ್ಟ ಪಾಕ್ ಸಂಸದ https://t.co/HRmKVHnY2o#Pakistan #WongCommander #AbhinandanVarthaman #PakMp #Video #KannadaNews
— PublicTV (@publictvnews) October 29, 2020