ಬಿಗ್ಬಾಸ್ ಸೀಸನ್-8ರ ವಾರದ ಸಂಚಿಕೆಯಲ್ಲಿ ಮೊದಲ ಬಾರಿಗೆ ದೊಡ್ಮನೆ ಹೊತ್ತಿ ಉರಿದಿದೆ. ಚಕ್ರವರ್ತಿ ಚಂದ್ರಚೂಡ್ರವರು ಲ್ಯಾಗ್ ಮಂಜು ವಿರುದ್ಧ ಕಿಚ್ಚನ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮೊದಲನೇಯದಾಗಿ ಮಾತು ಆರಂಭಿಸಿದ ಚಕ್ರವರ್ತಿಯವರು, ನನಗೆ ಮೂರು ವಿಷಯ ಕಾಡುತ್ತಿದೆ. ಮಂಜುರವರು ಎಲಿಮಿನೇಷನ್ ವೇಳೆ ಹಳೆಯದನ್ನು ಯಾವುದನ್ನೂ ಮಾತನಾಡಬಾರದು ಬೆಂಕಿಯಲ್ಲಿ ಸುಟ್ಟಾಗಿದೆ ಎಂದರು. ನಂತರ ನನ್ನ ತಂದೆ, ತಾಯಿ ಹಳ್ಳಿಯ ಮುಗ್ಧ ಜನ ನನಗೆ ಅವರು ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಕೆಟ್ಟವರು ಅವರ ಜೊತೆ ಸೇರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ನಾನು ಅವರ ತಂದೆ, ತಾಯಿಗೆ ಗೌರವ ಕೊಡುತ್ತೇನೆ. ಅವರು ನನ್ನ ಜೊತೆ ಸೇರಬೇಡ ಎಂದ ಮೇಲೆ ಮಂಜುರವರು ನನಗೆ ಅಣ್ಣಾ ಎಂದು ಕರೆಯಬಾರದು ಎಂದು ಚಕ್ರವರ್ತಿಯವರು ಕೆಂಡಕಾರಿದ್ದಾರೆ.
Advertisement
Advertisement
ನನ್ನ ತಂದೆ ತಾಯಿ ಕೂಡ ನನಗೆ ಒಂದು ಹೇಳಿ ಕಳುಹಿಸಿದ್ದಾರೆ, ಎಲಿಮಿನೇಷನ್ ರೌಂಡ್ ವೇಳೆ ಹೇಳಬೇಕಾಗಿತ್ತು. ಆದರೆ ಈಗ ಟೈಮ್ ಬಂದಿದೆ ಎಂದು ಕೊಳ್ಳುತ್ತೇನೆ. ಕರ್ನಾಟಕದಲ್ಲಿ ಸುಮಾರು 363ಕ್ಕೂ ಹೆಚ್ಚು ಭಾಷೆಯ ಸೊಗಡುಗಳಿದೆ. ಈ ಎಲ್ಲ ಭಾಷೆಯ ಸೊಗಡಿನಲ್ಲಿಯು ನುಗ್ಗೆ ಕಾಯಿಗೂ ಹಾಗೂ ಮಾವಿನ ಹಣ್ಣಿಗೂ ಒಂದು ಸಂಬಂಧವಿದೆ. ಒಂದು ಹೆಣ್ಣು ಮಗಳಿಗೆ ನಿನ್ನೆ ನುಗ್ಗೆ ಕಾಯಿ ತಿನ್ನಿಸಿದೆ ಇಂದು ಮಾವಿನ ಹಣ್ಣು ತಿನ್ನಿಸುತ್ತಿದ್ದಾನೆ ಎಂದರೆ ಇದು ಸಿನಿಮಾದಲ್ಲಿ ಬಂದಿರುವುದು ಮಾತ್ರವಲ್ಲ ಒಂದು ಸೈಟಿಫಿಕ್ ರೀಸನ್ ಇದೆ. ಎಲ್ಲ ಪ್ರಾಂತ್ಯಗಳಲ್ಲಿಯೂ ಇದು ಗಂಡ ಹೆಂಡತಿಯರ ನಾಟಕ.
Advertisement
ನಂತರ ಬಾರೇ ಸರಸಕ್ಕೆ ಎಂದು ಸ್ನೇಹಿತರನ್ನು ಕರೆಯುವುದಿಲ್ಲ. ಅಲ್ಲದೇ ನನ್ನನ್ನೇ ಸ್ವಲ್ಪದಿನ ಭಾವನಾಗಿ ಮಾಡಿಕೊಂಡಿದ್ದರು. ನನ್ನ ಜೊತೆ ಕೊಟ್ಟು ತೆಗೆದುಕೊಳ್ಳುವ ವಿಷಯ ಕೂಡ ನಡೆದಿತ್ತು. ಲೇ ಹೆಂಡ್ತಿ ಬಾರೇ ಎಂದು ಮಾತನಾಡಿದ್ದು, ಇದನ್ನು ಜಗತ್ತು ಮಾತನಾಡಿದೆ, ಕರ್ನಾಟಕವೂ ಮಾತನಾಡಿದೆ, ನಾನು ಮಾತನಾಡಿದ್ದೇನೆ. ಒಂದು ಹೆಣ್ಣನ್ನು ಒಂದು ಶೋ ಗೋಸ್ಕರ ಈ ಮನುಷ್ಯ ಹೇಗೆ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ? ಅವರರವರ ಇಷ್ಟ ಇರಬಹುದು, ಆದರೆ ನಾವು ಅದರ ಪಾಲುದಾರರಲ್ಲ. ಆದರೆ ನಾನು ಸದಸ್ಯ ಎಂದ ಮೇಲೆ ನಾನು ನನ್ನ ಅಭಿಪ್ರಾಯವನ್ನು ಒಳಗಡೆಯು ಹೇಳಿದ್ದೇನೆ. ಇದು ಕೃತಕವಾಗಿ ಕಾಣಿಸುತ್ತಿದೆ ಅಂತ ಅದನ್ನೇ ಹೊರಗಡೆಯು ಹೇಳಿದ್ದೇನೆ.
ಇದೇ ಮಂಜು ಪಾವಗಡರವರಿಗೆ ನೀನು ಹಳ್ಳಿ ಹಕ್ಕಿ, ಹಳ್ಳಿ ಪ್ರತಿಭೆ ತೆನಾಲಿ ರಾಮ ಆಗಬೇಕು. ಇದನ್ನು ಮಾಡಬೇಡ ಎಂದು ಹೇಳಿದ್ದೇನೆ. ಅಲ್ಲದೇ ನಿನ್ನೆಯಿಂದ ನನಗೆ ನೀನು ಹಾಗೇ ಹೋಗಿ ಬಿಡು ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಗ್ಬಾಸ್ ಯಾರಪ್ಪನ ಆಸ್ತಿ. ಬಿಗ್ಬಾಸ್ನನ್ನು ಯಾರು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಕೆಂಡಕಾರಿದ್ದಾರೆ.
ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ. ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ. ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.
ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.
ನನಗೆ ಈ ಮನೆಯಲ್ಲಿ ಮುದ್ದಾದ ಪ್ರೀತಿಯ ಜೋಡಿ ಕಂಡಿದೆ. ಒಂದು ಮುದ್ದಾದ ಸ್ನೇಹದ ಜೋಡಿ ಕಂಡಿದೆ, ಒಂದಷ್ಟು ವಿಶ್ವಾಸಗಳು ಕಂಡಿದೆ, ತಂಗಿ ಕಂಡಿದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ ಆಟದ ಕಾರಣಕ್ಕೆ ನನ್ನ ಮಾನವೀಯತೆಯನ್ನು ನನ್ನ ಓದನ್ನು ನನ್ನ ಜ್ಞಾನವನ್ನು ಕಳೆದುಕೊಳ್ಳಲು ತಯಾರಿಲ್ಲ. ಅವರ ತಂದೆ, ತಾಯಿ ಹೇಳಿ ಕಳುಹಿಸಿದ್ದಾರೆ ಅಲ್ವಾ ಸರ್ ನಾನು ಎಷ್ಟು ಸಂಗಡ ಈ ಮನೆಯಲ್ಲಿ ಇರುತ್ತೇನೋ ಅಷ್ಟು ಹೊತ್ತು ನನ್ನ ಸಂಗಡ ಮಾಡಬಾರದು. ಗೌರವವಾರ್ಥವಾಗಿ ಹೇಳುತ್ತಿದ್ದೇನೆ ಬಿಗ್ಬಾಸ್ ಮನೆ ಯಾರಿಗೂ ಸೇರಿದ್ದಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ರವರು ಈ ಮನೆಯ ಸದಸ್ಯರು, ಈ ಮನೆಯಲ್ಲಿ ಯಾವುದೇ ಕೃತಕತೆ ನಡೆದರೂ ನನ್ನ ಯುದ್ಧ ಆರಂಭ. ಅದು ಒಂದು ಕ್ಷಣ ಇದ್ದರೂ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ – ದಿವ್ಯಾ