Bengaluru CityKarnatakaLatestMain Post

ನಾನು ರಾಜ್ಯದ ಮುಖ್ಯಮಂತ್ರಿ, ಟಿಕೆಟ್ ಬೇಡ – ಬಿಎಂಟಿಸಿಯಲ್ಲಿ ಮಹಿಳೆ ಕಿರಿಕ್

ಬೆಂಗಳೂರು: ಮಾಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್ ಹತ್ತಿ ಟಿಕಿಟ್ ಪಡೆಯದೆ ನಾನು ಯಾಕೆ ಟಿಕೆಟ್ ತೆದುಕೊಳ್ಳಲಿ. ನಾನು ರಾಜ್ಯದ ಮುಖ್ಯಂತ್ರಿ ಇದ್ದೇನೆ ಎಂದು ಕಂಡಕ್ಟರ್ ಬಳಿ ಕಿರಿಕ್ ಮಾಡಿರುವ ಘಟನೆ ನಡೆದಿದೆ.

ಪ್ರತಿದಿನ ಬಿಎಂಟಿಸಿ ಬಸ್ ಹತ್ತುವ ಮಹಿಳೆಯೊಬ್ಬರು ನಾನು ಟಿಕೆಟ್ ಪಡೆಯುವುದಿಲ್ಲ ಎಮದು ಕ್ಯಾತೆ ತೆಗೆದಿದ್ದಾರೆ. ಕಂಡಕ್ಟರ್ ಟಿಕೆಟ್ ತಗೊಳ್ಳಿ ಮೇಡಂ ಅಂದಿದ್ದಾರೆ. ಆದರೆ ಮಹಿಳೆ, ನಾನು ಈ ರಾಜ್ಯದ ಮುಖ್ಯಮಂತ್ರಿ ಇದ್ದೇನೆ. ನನಗೆ ಅಥಾರಿಟಿ ಇದೆ. ನಾನು ಹೇಳಿದ ಕಡೆ ನೀವು ಕರೆದುಕೊಂಡು ಹೋಗಬೇಕಷ್ಟೆ. ನನಗೆ ಉಚಿತವಾಗಿ ಸಂಚಾರ ಮಾಡಲು ಹಕ್ಕಿದೆ. ನನ್ನನ್ನು ಬಿಟ್ಟು ಬೇಕಾದರೆ ಉಳಿದವರನ್ನ ಚೆಕ್ ಮಾಡಿ. ನಾನು ಯಾಕೆ ಟಿಕೆಟ್ ತೆಗೆದುಕೊಳ್ಳಲಿ ಎಂದು ಅವಾಜ್ ಹಾಕಿದ್ದಾಳೆ.

ಲೈನ್ ಚೆಕ್ಕಿಂಗ್ ಸಿಬ್ಬಂದಿ ಬಂದರೂ ಮಹಿಳೆ ಮಾತ್ರ ಜಗಳಕ್ಕೆ ಇಳಿದಿದ್ದಾಳೆ. ಈ ಮಧ್ಯೆ ತಡವಾಯ್ತು ಅಂತ ಸಹ ಪ್ರಯಾಣಿಕರು ಕೂಡ ಟಿಕೆಟ್ ತಗೊಳ್ಳಿ ಎಂದು ಮಹಿಳೆಗೆ ಬುದ್ಧಿ ಹೇಳಿದ್ದಾರೆ. ನಂತರ ಹಣ ಕೊಟ್ಟು ಟಿಕೆಟ್ ಪಡೆದಿದ್ದಾಳೆ. ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಹೋಗುವ ಮಹಿಳೆ ಈ ರೀತಿ ಸಾಕಷ್ಟು ಬಾರಿ ಕಿರಿಕ್ ಮಾಡಿಕೊಂಡಿದ್ದಾಳೆ. ಈ ಮಹಿಳೆಯ ಕಿರಿಕ್ ಬಿಎಂಟಿಸಿಗೆ ಚಾಲಕ ನಿರ್ವಾಹಕರಿಗೆ ತಲೆನೋವಾಗಿದೆ.

Leave a Reply

Your email address will not be published. Required fields are marked *

Back to top button