Connect with us

Cinema

ನಾನಿ ಜೊತೆಗಿನ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ರಶ್ಮಿಕಾ?

Published

on

ಹೈದರಾಬಾದ್: ಟಾಲಿವುಡ್ ನಟ ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಹೀರೋಯಿನ್‍ಗಳ ಆಯ್ಕೆ ಕುರಿತು ಸಖತ್ ಚರ್ಚೆ ನಡೆಯುತ್ತಿದ್ದು, ಚಿತ್ರದಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಯಾಕೆ ನಿರಾಕರಿಸಿದರು, ಕಾರಣವೇನು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಟಾಲಿವುಡ್‍ನಲ್ಲಿ ನಾನಿಯ ಮುಂದಿನ ಸಿನಿಮಾ ಶ್ಯಾಮ್ ಸಿಂಗ್ ರಾಯ್, ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇದೀಗ ಚಿತ್ರ ತಂಡ ಹೀರೋಯಿನ್ ಆಯ್ಕೆಯಲ್ಲಿ ತೊಡಗಿದೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರಂತೆ ಪ್ರಮುಖ ಮಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರಂತೆ, ಅದರಂತೆ ಎರಡನೇ ನಟಿಯಾಗಿ ನಟಿಸಲು ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ರಶ್ಮಿಕಾ ಈ ಆಫರ್ ತಿರಸ್ಕರಿಸಿದ್ದು, ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿಲ್ಲ.

ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡುತ್ತಿದ್ದಂತೆ, ಯಾಕೆ, ಏನು ಎಂಬ ಚರ್ಚೆ ಶುರುವಾಗಿದೆ. ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ಯಾಕೆ ರಿಜೆಕ್ಟ್ ಮಾಡಿದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ರಶ್ಮಿಕಾ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಶ್ಮಿಕಾಗೆ ತಮ್ಮ ಪಾತ್ರ ಇಷ್ಟವಾಗಿತ್ತಂತೆ ಆದರೆ ಸಾಯಿ ಪಲ್ಲವಿ ನಟಿಸುತ್ತಿರುವ ಒಂದೇ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಸಾಯಿ ಪಲ್ಲವಿ ಸೆನ್ಸೇಶನ್ ಕ್ವೀನ್ ಎಂಬ ಹೆಗ್ಗಳಿಕೆ ಪಡೆದಿದ್ದು, ತಮ್ಮ ಅದ್ಭುತ ನಟನೆ ಮತ್ತು ಡ್ಯಾನ್ಸ್ ಮೂಲಕ ಇಡೀ ಸಿನಿಮಾವನ್ನು ಆವರಿಸುವ ಸಾಧ್ಯತೆ ಇದೆ. ಇದರಿಂದಾಗಿ ಉಳಿದ ನಾಯಕಿಯರ ಪಾತ್ರಗಳಿಗೆ ಅಷ್ಟು ಪ್ರಾಧಾನ್ಯತೆ ಸಿಗುವುದಿಲ್ಲ. ಹೀಗಾಗಿ ರಶ್ಮಿಕಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಯಿಪಲ್ಲವಿ ಅಭಿಮಾನಿಗಳ ವಾದ. ಹೀಗೆ ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆ ನಡೆಯುತ್ತಿದೆ.

ಅಂದಹಾಗೆ ಶ್ಯಾಮ್ ಸಿಂಗ್ ರಾಯ್ ಸಿನಿಮಾವನ್ನು ರಾಹುಲ್ ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್ ಟೈನ್ಮೆಂಟ್ಸ್ ಇದಕ್ಕೆ ಬಂಡವಾಳ ಹೂಡಿದೆ. ತೆಲುಗಿನ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಸದ್ಯ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ನಂತರ ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲು ಅರ್ಜುನ್ ಈ ಸಿನಿಮಾಗೆ ಹೆಚ್ಚು ಸಂಭಾವನೆ ಸಹ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹೀಗಾಗಿ ಈ ಸಿನಿಮಾ ಭಾರೀ ಕುತೂಹಲ ಹುಟ್ಟಿಸಿದೆ.

Click to comment

Leave a Reply

Your email address will not be published. Required fields are marked *