ಮೈಸೂರು: ಕೋವಿಡ್-19 ಮಹಾಮಾರಿ ಎಲ್ಲಾ ಉದ್ಯಮಗಳ ಮೇಲೂ ಬಾರಿ ಹೊಡೆತ ಬೀರಿದೆ. ಇದರಿಂದ ಜನರಂತೂ ತತ್ತರಿಸಿ ಹೋಗಿದ್ದಾರೆ. ಹೀಗಿದ್ದರೂ ಕೊರೊನಾ ಸಾಂಕ್ರಮಿಕ ರೋಗದ ನಡುವೆಯೂ ರಾಜ್ಯದ ದೇವಾಲಯಗಳ ಹುಂಡಿಗೆ ಭಕ್ತರಿಂದ ಅಪಾರವಾದ ಹಣ ಸಂಗ್ರಹವಾಗಿದೆ.
ಇತ್ತೀಚೆಗಷ್ಟೇ ಮಲೆಮಹದೇಶ್ವರ ಬೆಟ್ಟದ ದೇವಾಲಯ ಹುಂಡಿ ಹಣ ಏಣಿಕೆ ಮಾಡಲಾಯಿತು. ಮಹದೇಶ್ವರನಿಗೆ ಭಕ್ತರಿಂದ ಕ್ಯೋಟ್ಯಂತರ ರೂಪಾಯಿ ಹಣ ಹರಿದುಬಂದಿದೆ. ಇದೀಗ ಮೈಸೂರಿನಲ್ಲಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಯಿತು. ಈ ವೇಳೆ ನಂಜುಂಡೇಶ್ವರ ಸನ್ನಿಧಾನಕ್ಕೂ ಒಂದು ಕೋಟಿಗೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.
Advertisement
Advertisement
ಹೌದು, ಈ ಬಾರಿ ನಂಜುಂಡೇಶ್ವರ ದೇವಾಲಯಕ್ಕೆ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಲ್ಲಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 1,01,71,910 ರೂ. ಸಂಗ್ರಹವಾಗಿದೆ. ಏಣಿಕೆ ವೇಳೆ 7500 ರೂ ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ಮೌಲ್ಯದ 2 ನೋಟುಗಳು ಹಾಗೂ 500 ಮೌಲ್ಯದ 11 ನಿಷೇಧಿತ ನೋಟುಗಳು ಸಂಗ್ರಹವಾಗಿದೆ. ಅಲ್ಲದೆ 2 ವಿದೇಶಿ ಕರೆನ್ಸಿಗಳು ಕಾಣಿಕೆ ರೂಪದಲ್ಲಿ ಬಂದಿದೆ.
Advertisement
Advertisement
ಇಲ್ಲಿಯವರೆಗೂ 20ಕ್ಕೂ ಹೆಚ್ಚು ಹುಂಡಿಗಳ ಹಣವನ್ನು 50ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ. ಜೊತೆಗೆ ಹುಂಡಿಯಲ್ಲಿ 70 ಗ್ರಾಂ ಚಿನ್ನ ಹಾಗೂ 3.5 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಲಾಕ್ಡೌನ್ ಮುಗಿಯುತ್ತಿದ್ದಂತೆ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಉದಾರವಾಗಿ ಕಾಣಿಕೆ ಸಲ್ಲಿಸಿದ್ದಾರೆ.