ಅಬುಧಾಬಿ: ಸಾಮಾನ್ಯವಾಗಿ ಲಾಟರಿ ಹೊಡೆಯಿತು ಅಂದ್ರೆ ಹಣ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ನಾವು ಚಿಂತನೆ ಮಾಡಿಕೊಂಡು ಏನೇನೂ ಪ್ಲಾನ್ಗಳನ್ನು ಹುಡುಕುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಸಿಕ್ಕ ಬಂಪರ್ ಉಡುಗೊರೆಯನ್ನು ತನ್ನ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವ ತೀರ್ಮಾನ ಮಾಡಿದ್ದಾರೆ.
ಹೌದು. ಬಂಗಾಳ ಮೂಲದ ದೀಪಂಕರ್(37) ಕಳೆದ 9 ವರ್ಷಗಳಿಂದ ಯುಎಇ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರಿಗೆ ದುಬೈನಲ್ಲಿ 24 ಕೋಟಿ ಬಂಪರ್ ಬಹುಮಾನ ಬಂದಿದ್ದು, ಈ ಹಣವನ್ನು ತನ್ನ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿದಂತೆ 11 ಮಂದಿಯೊಂದಿಗೆ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
Advertisement
ಅಬುಧಾಬಿ ಬಂಪರ್ ಟಿಕೆಟ್ ನ ಡ್ರಾ ಸೋಮವಾರ ನಡೆದಿತ್ತು. ವಿಜೇತ ಲಕ್ಕಿ ಸಂಖ್ಯೆ 041486 ದೀಪಂಕರ್ ಅವರದ್ದು ಆಗಿತ್ತು. ಜುಲೈ 14 ರಂದು ದೀಪಂಕರ್ ಟಿಕೆಟ್ ಖರೀದಿಸಿದ್ದು, ಅಬುಧಾಬಿ ಬಂಪರ್ನ 218 ನೇ ಡ್ರಾ ಆಗಿತ್ತು. ಮುಂದಿನ ತಿಂಗಳು 3 ರಂದು ಮತ್ತೊಂದು ಡ್ರಾ ನಡೆಯಲಿದ್ದು, ಅದರ ಅಭಿಯಾನ ಈಗಾಗಲೇ ಪ್ರಾರಂಭವಾಗಿದೆ. ಅನುದಾನದ ಮೌಲ್ಯ 20 ಕೋಟಿ 47 ಲಕ್ಷ ಆಗಿದೆ. ಹೊಸ ಟಿಕೆಟ್ ಖರೀದಿಸಲು ಅವರು ಇನ್ನೂ ನಿರ್ಧರಿಸಿಲ್ಲ ಎಂದು ದೀಪಂಕರ್ ಹೇಳಿದರು.
Advertisement
Advertisement
ದೀಪಂಕರ್, ದುಬೈ ಮೂಲದ ಕಂಪನಿಯೊಂದರಲ್ಲಿ ಕಣ್ಣಿನ ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1,83,992 ರೂ. ಸಂಬಳ ಪಡೆಯುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಪಡೆಯುತ್ತೇನೆ ಅಂತ ಕನಸು ಕೂಡ ಕಂಡಿಲ್ಲ. ಮಗಳಿಗೆ ಇದೀಗ ಕೇವಲ ಮೂರು ವರ್ಷ ವಯಸ್ಸಾಗಿದ್ದು, ತನ್ನ ಸಂಬಳದ ಒಂದು ಭಾಗವನ್ನು ಆಕೆಯ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುವುದು. ಉಳಿದ ಭಾಗವನ್ನು ಉಳಿತಾಯ ಮತ್ತು ದಾನಕ್ಕಾಗಿ ಮೀಸಲಿಡಲಾಗುತ್ತದೆ. ಸದ್ಯ ಪತ್ನಿ ಮತ್ತು ಮಗಳು ಊರಿಗೆ ಹಿಂದಿರುಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಊರಲ್ಲೇ ಇದ್ದಾರೆ. ಇಲ್ಲವೆಂದಲ್ಲಿ ಇದೀಗ ಸಂಭ್ರಮಾಚರಣೆ ಮಾಡಬಹುದಿತ್ತು ಎಂದು ದೀಪಂಕರ್ ತಿಳಿಸಿದರು.