CinemaLatestMain Post

‘ದುಡ್ಡಿಗಾಗಿ ವಂಚನೆ’ – ಸೋನು ಸೂದ್ ವಿರುದ್ಧದ ಪೋಸ್ಟ್‌ಗೆ ಲೈಕ್ ಕೊಟ್ಟ ಕಂಗನಾ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಕೋವಿಡ್-19 ಹೆಸರಿನಲ್ಲಿ ದುಡ್ಡು ಮಾಡುತ್ತಿದ್ದಾರೆ ಎಂಬ ಸೋಶಿಯಲ್ ಮೀಡಿಯಾದ ಪೋಸ್ಟ್‌ವೊಂದಕ್ಕೆ ನಟಿ ಕಂಗನಾ ರಣಾವತ್ ಲೈಕ್ ಕೊಡುವ ಮೂಲಕರ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಅನೇಕ ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡಿದ್ದರು. ಇವರೆಲ್ಲರ ಮಧ್ಯೆ ನಟ ಸೋನು ಸೂದ್ ಕೂಡ ಸಂಕಷ್ಟದಲ್ಲಿದ್ದ ಅನೇಕ ಜನರಿಗೆ ನೆರವು ನೀಡಿ ರೀಲ್‍ನಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಮಿಂಚುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ ಹಲವಾರು ಮಂದಿ ಸೋನು ಸೂದ್ ಪ್ರತಿಮೆಯನ್ನು ಸ್ಥಾಪಿಸಿ ದೇವರಂತೆ ಪೂಜೆ ಕೂಡ ಮಾಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ಸಹಿಸಲಾಗದ ಕೆಲವರು ಸೋನು ಸೂದ್‍ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಒಬ್ಬರು. ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಕಂಗನಾ ರಣಾವತ್ ಸೋನು ಸೂದ್‍ರನ್ನು ಟೀಕೆ ಮಾಡಿದ್ದ ಪೋಸ್ಟ್‍ವೊಂದಕ್ಕೆ ಲೈಕ್ ಕೊಟ್ಟಿದ್ದಾರೆ.

ಸದ್ಯ ಕೊರೊನಾ ತನ್ನ ಎರಡನೇ ಅಲೆ ಆರ್ಭಟ ಶುರು ಮಾಡಿದ್ದು, ಈ ಬಾರಿಯೂ ನಟ ಸೋನು ಸೂದ್ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ಜೊತೆಗೆ ಇತ್ತೀಚಿಗೆ ಸೋನು ಸೂದ್ ಆಕ್ಸಿಜನ್ ಸಿಲಿಂಡರ್ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕ್ಸಿಜನ್ ಬೆಲೆ 2 ಲಕ್ಷ ಎಂದು ಉಲ್ಲೇಖಿಸಲಾಗಿದೆ ಸದ್ಯ ಈ ಜಾಹಿರಾತು ಪೋಸ್ಟ್‍ಗೆ ಕೆಲವರು ಸೋನು ಸೂದ್ ದುಡ್ಡಿಗಾಗಿ ಹೀಗೆ ಮಾಡುತ್ತಿದ್ದಾರೆ. ಸೋನು ಸೂದ್ ಮೋಸಗಾರ, ವಂಚಕ ಎಂದು ಟ್ರೋಲ್ ಮಾಡುತ್ತಿದ್ದಾರೆ. ಸೋನುಸೂದ್ ಕಾರ್ಯಕ್ಕೆ ಎಲ್ಲರೂ ಶ್ಲಾಘಿಸುತ್ತಿದ್ದಾರೆ ಕಂಗನಾ ರಣಾವತ್ ಮಾತ್ರ ಲೈಕ್ ನೀಡಿದ್ದಾರೆ.

ಈ ವಿಚಾರ ಸೋನು ಸೂದ್ ಅವರ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಕಳೆದ ವರ್ಷದಿಂದ ಸಂಕಷ್ಟದಲ್ಲಿರುವ ಕನರಿಗೆ ಸಹಾಯ ಮಾಡುತ್ತಿರುವ ಸೋನು ಸೂದ್‍ಗೆ ವಂಚಕ ಮೋಸಗಾರ ಎನ್ನುತ್ತಿರುವುದು ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button