Connect with us

Cinema

ಟಾಲಿವುಡ್‍ಗೆ ವಾರ್ನರ್ ಎಂಟ್ರಿ ಸುಲಭ- ವಿವಿಎಸ್ ಲಕ್ಷ್ಮಣ್

Published

on

ಹೈದರಾಬಾದ್: ಟಾಲಿವುಡ್ ಸಿನಿ ರಂಗಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಎಂಟ್ರಿ ಸುಲಭ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೀವನ್ ಸ್ಮಿತ್ ಅವರೊಂದಿಗಿನ ಲೈವ್ ಚಾಟಿಂಗ್‍ನಲ್ಲಿ ಮಾತನಾಡಿದ ವಿವಿಎಸ್ ಲಕ್ಷ್ಮಣ್ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಐಪಿಎಲ್ ಫ್ರ್ಯಾಂಚೈಸ್ ಸನ್‍ರೈಸರ್ಸ್ ಹೈದರಾಬಾದ್‍ನ ಮಾರ್ಗದರ್ಶಕರಾಗಿರುವ ಲಕ್ಷ್ಮಣ್ ಅವರು ತಂಡದ ನಾಯಕ ಡೇವಿಡ್ ವಾರ್ನರ್ ಅವರ ನೃತ್ಯ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾತು ಆರಂಭಿಸಿದ ವಿವಿಎಸ್ ಲಕ್ಷ್ಮಣ್, “ಡೇವಿಡ್ ವಾರ್ನರ್ ಸದ್ಯ ಫುಲ್ ಆ್ಯಕ್ಟಿವ್ ಆಗಿದ್ದಾರೆ ಅಲ್ವಾ? ಸಾಕಷ್ಟು ನೃತ್ಯಗಳನ್ನು ಮಾಡುತ್ತಿದ್ದಾರೆ. ಅವರು ಭಾರತೀಯರಲ್ಲಿ ಸಾಕಷ್ಟು ಉತ್ಸಾಹವನ್ನು ಮೂಡಿಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಬೇಕು ಅಂದ್ರೆ ಟಿಕ್‍ಟಾಕ್‍ಗೆ ಭೇಟಿ ನೀಡಬಹುದು ಎಂದು ಸ್ಟೀವ್ ಸ್ಮಿತ್‍ಗೆ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಮಿತ್, ಆಸ್ಟ್ರೇಲಿಯಾ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಾರ್ನರ್ ಇಂತಹ ಪ್ರದರ್ಶವನ್ನು ತೋರಿಸಿಲ್ಲ. ಆದರೂ ಲಾಕ್‍ಡೌನ್‍ನಂತಹ ಸಮಯದಲ್ಲಿ ಅವರು ಇತರರಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಿರುವ ವಿಧಾನ ಇಷ್ಟವಾಯಿತು ಎಂದರು. ಆಗ ಮಾತು ಬೆಳೆಸಿದ ಲಕ್ಷ್ಮಣ್ ಅವರು, ಟಾಲಿವುಡ್‍ಗೆ ವಾರ್ನರ್ ಸುಲಭವಾಗಿ ಎಂಟ್ರಿ ಕೊಡಬಹುದು. ಏಕೆಂದರೆ ಅಷ್ಟೊಂದು ಅಭಿಮಾನಿಗಳು ಅವರಿಗೆ ಟಾಲಿವುಡ್‍ನಲ್ಲಿ ಡಿಕ್ಕಿದ್ದಾರೆ” ಎಂದರು.

ಡೇವಿಡ್ ವಾರ್ನರ್ ತೆಲಗು, ಹಿಂದಿ ಸೇರಿದಂತೆ ಭಾರತದ ವಿವಿಧ ಭಾಷೆಯ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಜೊತೆಗೆ ಆ ವಿಡಿಯೋಗಳನ್ನು ಟಿಕ್‍ಟಾಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾ ಹಾಡಿಗೂ ವಾರ್ನರ್ ಸ್ಟೆಪ್ ಹಾಕಿದ್ದರು.

Click to comment

Leave a Reply

Your email address will not be published. Required fields are marked *