ಮೊಟ್ಟೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮೊಟ್ಟೆಯಿಂದ ನಾನಾಬಗೆಯ ಆಹಾರವನ್ನು ತಯಾರಿಸಬಹುದಾಗಿದೆ. ಚಿಕನ್ ಚಿಲ್ಲಿ, ಮಟನ್ ಚಿಲ್ಲಿಯನ್ನು ಎಲ್ಲರೂ ತಿಂದಿರುತ್ತಾರೆ.ಇಂದು ನೀವು ಕೊಂಚ ಡಿಫರೆಂಟ್ ಆಗಿ ನಿಮ್ಮ ಮನೆಯಲ್ಲಿ ಖಾರವಾದ ಮೊಟ್ಟೆ ಚಿಲ್ಲಿಯನ್ನು ಮಾಡಲು ಪ್ರಯತ್ನಿಸಿ.
Advertisement
ಬೇಕಾಗುವ ಸಾಮಗ್ರಿಗಳು:
* ಮೊಟ್ಟೆಗಳು – 4
*ಕಾರ್ನ್ಫ್ಲೋರ್ (ಜೋಳದ ಹಿಟ್ಟು)- ಅರ್ಧ ಕಪ್
*ಒಣ ಮೆಣಸಿನಕಾಯಿ – 2
* ಶುಂಠಿ
*ಬೆಳ್ಳುಳ್ಳಿ – 4-5
*ಈರುಳ್ಳಿ- 1
*ರೆಡ್ ಚಿಲ್ಲಿ ಸಾಸ್- 2 ಟೀ ಸ್ಪೂನ್
*ಸೋಯಾ ಸಾಸ್ – 1 ಟೀ ಸ್ಪೂನ್
*ನಿಂಬೆ ರಸ – 1 ಟೀ ಸ್ಪೂನ್
*ಜೇನು ತುಪ್ಪ- 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 1ಕಪ್
* ಹಸಿ ಮೆಣಸಿನಕಾಯಿ- 4
* ಕ್ಯಾಪ್ಸಿಕಂ-1
Advertisement
Advertisement
ಮಾಡುವ ವಿಧಾನ:
* ನೀರು, ಕಾರ್ನ್ಫ್ಲೋರ್, ಉಪ್ಪು ಹಾಕಿ ಮಿಶ್ರಣವನ್ನು ಹಾಕಿ ಬಜ್ಜಿ ಹಿಟ್ಟಿನ ರೀತಿ ಮಾಡಿಕೊಳ್ಳಿ.
* ಈಗ ತಯಾರಿಸಿಟ್ಟಿರುವ ಹಿಟ್ಟಿನಲ್ಲಿ ಕತ್ತರಿಸಿಟ್ಟ ಮೊಟ್ಟೆಗಳನ್ನು ಅದ್ದಿ ಅಡುಗೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಮೊಟ್ಟೆಗಳು ಬಜ್ಜಿಯ ರೀತಿ ಹೊಂಬಣ್ಣಕ್ಕೆ ಬರುವರೆ ಬೇಯಿಸಬೇಕು.
Advertisement
* ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಇದಕ್ಕೆ ಒಣ ಮೆಣಸಿನಕಾಯಿ,ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಬೆಳ್ಳುಳ್ಳಿ, ಶುಂಠಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.
* ನಂತರ ಇದಕ್ಕೆ ಈರುಳ್ಳಿ, ರೆಡ್ ಚಿಲ್ಲಿಸಾಸ್, ಸೋಯಾ ಸಾಸ್, ಉಪ್ಪು, ಜೇನು ತುಪ್ಪ ಮತ್ತು ನಿಂಬೆರಸವನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಬೇಕು.
* ನಂತರ ಈಗ ಇದಕ್ಕೆ ಈ ಮೊದಲೇ ಫ್ರೈಮಾಡಿದ ಮೊಟ್ಟೆ ತುಂಡು, ಕಾರ್ನ್ಫ್ಲೋರ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. 2-3 ನಿಮಿಷಗಳ ಕಾಲ ಬೇಯಿಸಿದರೆ ಮೊಟ್ಟೆ ಚಿಲ್ಲಿ ಸವಿಯಲು ಸಿದ್ಧವಾಗುತ್ತದೆ.