ಬೀದರ್: ಕೊರೊನಾ ಎರಡನೇಯ ಅಲೆಯ ಪ್ರಾರಂಭದಲ್ಲಿ ರಾಜಧಾನಿ ಗಡಿ ಜಿಲ್ಲೆ ಬೀದರ್ ರೆಡ್ ಜೋನ್ನಲ್ಲಿತ್ತು. ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ಇಂದು ಅತಿ ಕಡಿಮೆ ಪಾಸಿಟಿವಿಟಿ ಮೂಲಕವಾಗಿ ರಾಜ್ಯಕ್ಕೆ ಮಾದರಿಯಾಗಿದೆ.
Advertisement
ಕಳೆದ ಒಂದು ವಾರದಿಂದ 1ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ರೇಟ್ ದಾಖಲಾಗುವ ಮೂಲಕ ಗಡಿ ಜಿಲ್ಲೆ ಬೀದರ್ ರಾಜ್ಯಕ್ಕೆ ಮಾದರಿಯಾಗಿದೆ. ಮೇ 31 ರಂದು 0.60, ಜೂನ್ 01 ರಂದು 0.80, 02 ರಂದು 0.90, 03 ರಂದು 0.92, 04 ರಂದು 0.7, 05 ರಂದು 0.98, 06 ರಂದು 0.37, 07 ರಂದು 0.72 ಪಾಸಿಟಿವಿಟಿ ರೇಟ್ ದಾಖಲಾಗಿದೆ. ಇದನ್ನೂ ಓದಿ: ಜಸ್ಟ್ 1 ಮಾವಿನ ಹಣ್ಣಿನ ಬೆಲೆ 1 ಸಾವಿರ – ಈಗಲೇ ಮುಂಗಡ ಬುಕ್ಕಿಂಗ್
Advertisement
Advertisement
ಜಿಲ್ಲಾಡಳಿತ, ಅರೋಗ್ಯ ಇಲಾಖೆ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಇಲಾಖೆಯ ಸತತ ಪರಿಶ್ರಮದಿಂದಾಗಿ ಇಂದು ಬೀದರ್ ಅತಿ ಕಡಿಮೆ ಪಾಸಿಟಿವಿಟಿ ಹೊಂದಲು ಕಾರಣವಾಗಿದೆ. ಜೊತೆಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಎನ್ನದ ಕೆಲಸ ಮಾಡಿದ್ದು ಇಂದು ಫಲಕೊಟ್ಟಿದೆ. ಕಳೆದ 15 ದಿನಗಳಿಂದ ಪಾಸಿಟಿವಿಟಿ ರೇಟ್ ಬಹಳ ಕಡಿಮೆಯಾಗಿದ್ದು, ಒಂದು ವಾರದಿಂದ 1 ಕ್ಕಿಂತ ಕಡಿಮೆ ಬರುತ್ತಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳ ಸಂಘಟಿತ ಹೋರಾಟದಿಂದ ಪಾಸಿಟಿವಿಟಿ ಕಡಿಮೆ ಬರಲು ಸಾಧ್ಯವಾಗಿದೆ.
Advertisement
ಕೊರೊನಾ ಮೂರನೇಯ ಅಲೆ ಬರುವ ಸಾದ್ಯತೆ ಇದ್ದು ಎಲ್ಲರು ಜಾಗೃತಿಯಿಂದ ಇರಬೇಕು. ಪ್ರತಿದಿನ 3 ಸಾವಿರ ಟೆಸ್ಟ್ ಮಾಡುತ್ತಿದ್ದರು ಒಂದಕ್ಕಿಂತ ಕಡಿಮ ಪಾಸಿಟಿವಿಟಿ ರೇಟ್ ಬರುತ್ತಿರುವುದು ಸಂತೋಷವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಪಕ್ಕದಲ್ಲೆ ಮಹಾರಾಷ್ಟ್ರ, ತೆಲಂಗಾಣದದಲ್ಲಿ ಕೊರೊನಾ ಕಾಟ ಇದ್ದರೂ ನಡುಗಡ್ಡೆಯಂತ್ತಿರುವ ಬೀದರ್ನಲ್ಲಿ ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕಿ ಅತಿ ಕಡಿಮೆ ಪಾಸಿಟಿವಿಟಿ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದು ಮಾತ್ರ ಸಂತೋಷದ ಸಂಗತಿಯಾಗಿದೆ.