ಹಾಸನ: ಕೊರೊನಾ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮಾಡಲು ದೊಡ್ಡಕರಡೇವು ಗ್ರಾಮಸ್ಥರು ಪೂರ್ವಜರು ಅನುಸರಿಸುತ್ತಿದ್ದ ವಿಶೇಷಪೂಜೆಯ ಮೊರೆಹೋಗಿದ್ದಾರೆ.
Advertisement
ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ಎಂದು ತಜ್ಞರು ಹೇಳುತ್ತಿರುವ ಬೆನ್ನಲ್ಲೇ, ಹಾಸನದ ದೊಡ್ಡಕರಡೇವು ಗ್ರಾಮದ ಜನ ರೋಗದಿಂದ ತಮ್ಮ ಮಕ್ಕಳ ರಕ್ಷಣೆಗೆ ದೇವರ ಮೊರೆ ಹೋಗಿದ್ದಾರೆ. ತಮ್ಮ ಪೂರ್ವಜರು ಸಾಂಕ್ರಾಮಿಕ ರೋಗದ ಸಮಯದಲ್ಲಿ ನಡೆಸುತ್ತಿದ್ದ ಪೂಜಾ ಕ್ರಮದಂತೆ, ಗ್ರಾಮದಲ್ಲಿ ಹದಿನೆಂಟು ವರ್ಷದ ನಂತರ ಸುಂಕನಮ್ಮನ ಹಬ್ಬವನ್ನು ಆಚರಿಸಿ, ಮೂರನೇ ಅಲೆ ಕೊರೊನಾ ಗ್ರಾಮವನ್ನು ಬಾಧಿಸದಂತೆ ದೇವರಲ್ಲಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ನಾನೇ ಕಣ್ಣಾರೆ ನೋಡಿದ್ದೀನಿ, ಚಿದಾನಂದ್ ಸವದಿಯೇ ಡ್ರೈವರ್ ಸೀಟ್‍ನಲ್ಲಿ ಕುಳಿತಿದ್ರು: ಪ್ರತ್ಯಕ್ಷದರ್ಶಿ
Advertisement
Advertisement
ಸಾಮಾನ್ಯವಾಗಿ ಗ್ರಾಮದಲ್ಲಿ ಯಾವುದಾದರೂ ರೋಗ ತೀವ್ರವಾಗಿ ಬಾಧಿಸಿದಾಗ, ಗ್ರಾಮಸ್ಥರೆಲ್ಲ ಊರ ಹೊರ ಭಾಗದಲ್ಲಿ ಒಂದೆಡೆ ಸೇರಿ, ದೇವರಿಗೆ ತಾವು ತಂದಿರುವ ಬಲಿ ಅರ್ಪಿಸಿ, ಅಲ್ಲಿಯೇ ಅಡುಗೆ ಮಾಡಿ, ದೇವರಿಗೆ ನೈವೇದ್ಯ ಕೊಟ್ಟು, ನಂತರ ಅಲ್ಲೇ ಊಟ ಮಾಡಿ ಸುಂಕನಮ್ಮನ ಹಬ್ಬ ಆಚರಿಸೋದು ಪದ್ಧತಿಯಾಗಿದೆ. ಅದರೆ ಈ ಬಾರಿ ಕೊರೊನಾ ಇರುವುದರಿಂದ, ಸುಂಕನಮ್ಮನ ಹಬ್ಬದಲ್ಲಿ ಪಾಲ್ಗೊಳ್ಳುವ ಗ್ರಾಮಸ್ಥರು ಪ್ರತಿ ಕುಟುಂಬದವರು ಮತ್ತೊಂದು ಕುಟುಂಬದಿಂದ ಸುಮಾರು ಹತ್ತು ಮೀಟರ್ ಅಂತರದ ಪಾಲಿಸಿ ಅಡುಗೆ ಮಾಡಬೇಕು. ದೇವರಿಗೆ ತಾವು ತಂದಿರುವ ಬಲಿ ಅರ್ಪಿಸಿ, ನೈವೇದ್ಯ ನೀಡುವಾಗಲು ಕೊರೊನಾ ನಿಯಮ ಪಾಲಿಸಬೇಕು ಎಂಬ ನಿಯಮ ಹಾಕಿಕೊಂಡು ಪೂಜೆ ಸಲ್ಲಿಸುತ್ತಿದ್ದಾರೆ.
Advertisement
ತಮ್ಮ ವಿಶಿಷ್ಟ ಆಚರಣೆಯ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ರೋಗದ ವಿರುದ್ಧ ಹೋರಾಡಲು ವೈಜ್ಞಾನಿಕ ಕ್ರಮ ಅನುಸರಿಸಬೇಕು. ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂಬ ಅರಿವು ನಮಗೆ ಇದೆ. ಅದರ ಜೊತೆಗೆ ನಾವು ಹಿಂದಿನಿಂದಲೂ ಅನುಸರಿಸರಿಸಿಕೊಂಡು ಬಂದಿರುವ ಧಾರ್ಮಿಕ ಪದ್ಧತಿಯಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹೀಗಾಗಿ ಸುಂಕನಮ್ಮನ ಹಬ್ಬ ಆಚರಿಸುತ್ತಿದ್ದೇವೆ ಅಂತಿದ್ದಾರೆ.