– ಅರಬ್ಬಿ ಸಮುದ್ರದ ಇಂಚಿಂಚು ಮಾಹಿತಿ ನೀಡಲಿದ್ದಾನೆ ಬಾಯ್
– ನೆದರ್ ಲ್ಯಾಂಡ್ ನಿರ್ಮಿತ 75 ಲಕ್ಷ ರೂ ವೆಚ್ಚದ ಬಾಯ್
ಕಾರವಾರ: ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯ ಸೇರಿದಂತೆ ದೇಶದ ಕಡಲಿನಲ್ಲಾಗುವ ಬದಲಾವಣೆಯನ್ನು ತಕ್ಷಣ ಗುರುತಿಸಿ ಮಾಹಿತಿ ರವಾನೆ ಮಾಡಲು ಹವಾಮಾನ ಇಲಾಖೆಗೆ ಕಷ್ಟಸಾಧ್ಯವಾಗುತಿತ್ತು. ಇದರಿಂದ ಮಳೆ, ಸಮುದ್ರದಲ್ಲಿ ವೈಪರಿತ್ಯ ಆಗುವ ಮೊದಲೇ ನಿಖರವಾಗಿ ಮಾಹಿತಿ ನೀಡಲಾಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ದೇಶದ ಕರಾವಳಿ ಭಾಗದಲ್ಲಿ ಹೊಸ ತಂತ್ರಜ್ಞಾನ ಹೊಂದಿದ ಎಂಕೆ-4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್ ಅನ್ನು ಕರಾವಳಿಯ 5 ಭಾಗಗಳಲ್ಲಿ ಅಳವಡಿಸುತ್ತಿದೆ.
Advertisement
ಕರ್ನಾಟಕ ರಾಜ್ಯದ ಕರಾವಳಿ ಭಾಗದ ಕಾರವಾರದ ಅರಬ್ಬಿ ಸಮುದ್ರದಲ್ಲಿ ಈ ಬಾಯ್ ಅಳವಡಿಸಲಾಗುತ್ತಿದೆ. ಈ ಮೂಲಕ ಕರ್ನಾಟಕ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಆಗುವ ಪ್ರತಿ ಬದಲಾವಣೆ, ಹವಾಮಾನ, ಮೀನುಗಳ ಸಾಂದ್ರತೆಯ ಮಾಹಿತಿಯನ್ನು ಇದು ನೀಡಲಿದ್ದು, ಇದೇ ಮೊದಲ ಬಾರಿಗೆ ಬ್ಯಾಟರಿ ಜೊತೆಗೆ ಸೋಲಾರ್ ಶಕ್ತಿ ಬಳಸಿಕೊಂಡು ಈ ಬಾಯ್ ಕಾರ್ಯ ನಿರ್ವಹಿಸಲಿದ್ದು ದೀರ್ಘ ಬಾಳಿಕೆ ಬರಲಿದೆ. ನೆದರ್ ಲ್ಯಾಂಡ್ ನಿರ್ಮಿತ 75 ಲಕ್ಷ ರೂ ವೆಚ್ಚದ ಬಾಯ್ ಇದಾಗಿದೆ.
Advertisement
Advertisement
ಇದರಿಂದಾಗಿ ಮೀನುಗಾರರಿಗೆ ಯಾವ ಪ್ರದೇಶದಲ್ಲಿ ಎಷ್ಟು ಮೀನುಗಳಿವೆ ಎಂಬುದನ್ನು 24 ಗಂಟೆಗೆ ಮೊದಲೇ ಮಾಹಿತಿ ನೀಡಿ ಮತ್ಸ್ಯ ಬೇಟೆಗೆ ಸಹಕಾರಿಯಾಗಲಿದೆ. ಜೊತೆ ಹವಾಮಾನ ವೈಪರಿತ್ಯದಿಂದ ಹಿಡಿದು ಸಮುದ್ರದಲ್ಲಿ ಆಗುವ ಬದಲಾವಣೆಯ ಪ್ರತಿ ಕ್ಷಣದ ಮಾಹಿತಿಯನ್ನ ಈ ಬಾಯ್ ನೀಡಲಿದೆ.
Advertisement
ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾರವಾರದ ಅರಬ್ಬಿ ಸಮುದ್ರದಲ್ಲಿ ಎಂಕೆ 4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್ ಅಳವಡಿಕೆ ಮಾಡಲಾಗಿದೆ. ಹಿಂದಿನ ಬಾಯ್ ಗಿಂತ ದ್ವಿಗುಣ ಮಟ್ಟದಲ್ಲಿ ಕಾರ್ಯಕ್ಷಮತೆಯನ್ನ ಹೊಂದಿದೆ. ಹವಾಮಾನ ವೈಪರಿತ್ಯ, ಅಲೆಗಳ ಎತ್ತರ, ಅಲೆಗಳ ದಿಕ್ಕು, ಅಲೆಗಳ ಮಾದರಿ, ಸಮುದ್ರ ಮೇಲ್ಮೈ ಉಷ್ಣತೆ ಅಳೆತೆ,ಸಮುದ್ರಭಾಗದಲ್ಲಿ ಮೀನುಗಳ ಸಾಂದ್ರತೆಗಳ ಮಾಹಿತಿ ಶೀಘ್ರದಲ್ಲಿ ನೀಡಲಿದೆ. ದೇಶದ ಐದು ಕರಾವಳಿ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಎಂಕೆ-4 ಮಾದರಿಯ ಬಾಯ್ ಅಳವಡಿಕೆ ಮಾಡಿದೆ. ಇನ್ಮುಂದೆ ಸ್ಯಾಟ್ಲೈಟ್ ಮೂಲಕ ಅರಬ್ಬಿ ಸಮುದ್ರದ ಇಂಚಿಂಚು ಮಾಹಿತಿ ಲಭ್ಯವಾಗಲಿದೆ.