ತುಮಕೂರು: ಎಟಿಎಂ ಕಾರ್ಡ್ ದತ್ತಾಂಶ ಕದ್ದು ಖಾತೆಗೆ ಕನ್ನ ಹಾಕುತ್ತಿದ್ದ ತುಮಕೂರು ಸಿ.ಇ.ಎನ್ ಪೊಲೀಸರು ಇಬ್ಬರು ಅಂತರಾಷ್ಟ್ರೀಯ ಹೈಟೆಕ್ ಕಳ್ಳರನ್ನು ಬಂದಿಸಿದ್ದಾರೆ.
ಎಟಿಎಂ ಯಂತ್ರಗಳಿಗೆ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಹಣ ಡ್ರಾ ಮಾಡುತ್ತಿದ್ದ ಉಗಾಂಡ ಮೂಲದ ಐವಾನ್ ಕಾಂಬೊಂಗೆ, ಕೀನ್ಯಾ ಮೂಲದ ಲಾರೆನ್ಸ್ ಮಾಕಾಮು ಬಂಧಿತರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದ ಇಬ್ಬರೂ ಖದೀಮರು ಕಳೆದ ಅಕ್ಟೋಬರ್ ಹಾಗೂ ನವೆಂಬರ್ ನಿಂದ ತುಮಕೂರು ಜಿಲ್ಲೆಯ ಕುಣಿಗಲ್, ತುಮಕೂರು ನಗರ, ಕುಣಿಗಲ್, ಕೆ.ಬಿ ಕ್ರಾಸ್ ಸೇರಿದಂತೆ ಹಲವು ಎಟಿಎಂ ಗಳಲ್ಲಿ ಕಾರ್ಡ್ಗಳ ಮಾಹಿತಿ ಕದಿಯುತ್ತಿದ್ದರು. ಚೆನೈ, ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ನಕಲಿ ಕಾರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದರು ಎನ್ನಲಾಗಿದೆ.
Advertisement
Advertisement
ಕೇಂದ್ರ ವಲಯ ಐಜಿಪಿ ಸೀಮಂತ್ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಂಧಿತರಿಂದ ವಿವಿಧ ಬ್ಯಾಂಕ್ಗಳ 20 ಎಟಿಎಂ ಕಾರ್ಡ್, ಕೃತ್ಯಕ್ಕೆ ಬಳಸಿದ ಸ್ಕಿಮ್ಮಿಂಗ್ ಮಷಿನ್ಗಳು ಸೇರಿದಂತೆ, ಒಂದು ಹೊಂಡಾ ಸಿಆರ್ವಿ ಕಾರನ್ನು ವಶಕ್ಕೆ ಪಡೆಯಲಾಗಿದೆ.
Advertisement
Advertisement
ಈ ಇಬ್ಬರೂ ಖದೀಮರು ವಿದ್ಯಾರ್ಥಿಗಳಾಗಿದ್ದು, ಒಬ್ಬ ಕಾಮರ್ಸ್ ವಿದ್ಯಾರ್ಥಿಯಾಗಿದ್ದು ಮತ್ತೊಬ್ಬ ಫಿಜಿಯೋ ತೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಎಟಿಎಂ ಕಾರ್ಡ್ ಗಳು ಗ್ರಾಹಕರ ಬಳಿ ಇದ್ದರೂ ಹಣ ಡ್ರಾ ಆಗಿರೋ ಮೆಸೇಜ್ ಬರುತ್ತಿತ್ತು. ಇದರಿಂದ ಸಾಕಷ್ಟು ಜನ ಹಣ ಕಳೆದುಕೊಂಡಿರುವ ಬಗ್ಗೆ ಸುಮಾರು 60ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಆರಂಭಿಸಿದ ಸಿ.ಇ.ಎನ್ ಪೊಲೀಸರು ಈಗಾಗಲೇ ಇಬ್ಬರು ಖದೀಮರನ್ನು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.