– ಮಹಾರಾಷ್ಟ್ರ ಬಳಿಕ ಆಂಧ್ರದಿಂದ ಕೊರೊನಾ ಆಗಮನ
ಅಮರಾವತಿ: ಮಹಾರಾಷ್ಟ್ರ ಕಂಟಕದ ಬಳಿಕ ಇದೀಗ ರಾಜ್ಯಕ್ಕೆ ಆಂಧ್ರದ ಕಂಟಕ ಪ್ರಾರಂಭವಾಗುವ ಭಯ ಎದುರಾಗಿದ್ದು, ಆಂಧ್ರ ಪ್ರದೇಶ ಅಂತರ್ ರಾಜ್ಯ ಬಸ್ ಸಂಚಾರವನ್ನು ಪ್ರಾರಂಬಿಸಲು ನಿರ್ಧರಿಸಿದೆ. ಹಂತ ಹಂತವಾಗಿ ರಾಜ್ಯಕ್ಕೆ 500 ಬಸ್‍ಗಳನ್ನು ಬಿಡಲು ಕ್ರಮ ಕೈಗೊಂಡಿದೆ.
ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ಬಸ್ ಬಿಡಲು ಆಂಧ್ರ ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 168 ಬಸ್‍ಗಳು ರಾಜ್ಯಕ್ಕೆ ಸಂಚರಿಸಲಿವೆ. ಜೂನ್ 17 ರಿಂದ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಧ್ಯೆ 168 ಬಸ್‍ಗಳು ಸಂಚರಿಸಲಿವೆ ಎಂದು ಆಂಧ್ರ ಸರ್ಕಾರ ತಿಳಿಸಿದೆ. ಒಟ್ಟು ನಾಲ್ಕು ಹಂತಗಳಲ್ಲಿ 500 ಬಸ್‍ಗಳು ಕರ್ನಾಟಕ ಆಂಧ್ರದ ಮಧ್ಯೆ ಸಂಚರಿಸಲಿವೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. apsrtconline.in ಮೂಲಕ ಸೀಟ್ ನೋಂದಾಯಿಸಿಕೊಂಡು ಪ್ರಯಾಣಿಸಲು ತಿಳಿಸಿದೆ.
Advertisement
Advertisement
ಮಂತ್ರಾಲಯ, ಬೆಂಗಳೂರು ಸೇರಿದಂತೆ ಈ ಹಿಂದಿನಂತೆ ರಾಜ್ಯದ ಪ್ರಮುಖ ನಗರಗಳಿಗೆ ಆಂಧ್ರ ಬಸ್‍ಗಳು ಸಂಚರಿಸಲಿವೆ. ಈ ಮೂಲಕ ಬಸ್‍ಗಳು ಆಂಧ್ರದಿಂದ ಕರ್ನಾಟಕಕ್ಕೆ ಕೊರೊನಾ ಸೋಂಕಿತರನ್ನು ಹೊತ್ತು ತರುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದಲ್ಲಿ ಪತ್ತೆಯಾಗಿರುವ ಬಹುತೇಕ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ್ದಾಗಿದ್ದು, ಇದೀಗ ಬಸ್ ಸಂಚಾರದಿಂದ ಮತ್ತೆ ಕೊರೊನಾಘಾತವಾಗುವ ಸಾಧ್ಯತೆ ಇದೆ.