– ಸುಮಾರು 80 ಲಕ್ಷ ರೂ. ನಷ್ಟ
ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಪಘಾತವೊಂದು ಸಂಭವಿಸಿದೆ. ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿದೆ. ಪರಿಣಾಮ ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ.
ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಮಲ್ಪೆ ಬಂದರು ಸಮೀಪ ಬರುವಾಗ ಬಂಡೆಗೆ ಬಡಿದಿದೆ.
Advertisement
Advertisement
ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19(ನಿನ್ನೆ)ರಂದು ವಾಪಸ್ ಆಗುವಾಗ ಅಚಾತುರ್ಯ ಮಡೆದಿದೆ. ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟ್ ನೀರಿನಲ್ಲಿ ಮುಳುಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ ನಲ್ಲಿದ್ದ 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
Advertisement
Advertisement
ಘಟನೆಯಿಂದಾಗಿ ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡೀಸೆಲ್ ಸಮುದ್ರ ಪಾಲಾಗುವ ಮೂಲಕ ಅಂದಾಜು 80 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.