ಇಂದಿನ ಕಾಲದಲ್ಲಿ ಮೂಗು ಬೊಟ್ಟು ಎಂಬುವುದು ತುಂಬಾ ಸಾಮಾನ್ಯವಾಗಿ ಎಂದೇ ಹೇಳಬಹುದು. ವಿಶೇಷವಾಗಿ ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಮೂಗುಬೊಟ್ಟು ಧರಿಸುತ್ತಾರೆ. ಮೂಗುತಿ ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.
Advertisement
ಮೂಗುಬೊಟ್ಟಿನಲ್ಲಿ ನೋಡಲು ಹೋದರೆ ಅನೇಕ ರೀತಿಯ ವಿಧವಿಧವಾದ ಡಿಸೈನ್‍ಗಳ ಮೂಗು ಬೊಟ್ಟುಗಳಿರುವುದನ್ನು ನಾವು ಕಾಣಬಹುದು. ಅದರಲ್ಲಿಯೂ ಚಿನ್ನ, ವಜ್ರ ಹಾಗೂ ಇತರ ರತ್ನ ಕಲ್ಲುಗಳಿಂದ ತಯಾರಿಸಿದ ನತ್ತುಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚಾಗಿರುತ್ತದೆ. ಮಹಿಳೆಯರ ಅಂದವನ್ನು ಮತ್ತುಷ್ಟು ಹೆಚ್ಚುಗೊಳಿಸುವ ಟ್ರೆಂಡಿ ಡಿಸೈನ್‍ನ ಕೆಲವು ಮೂಗುತಿ ಈ ಕೆಳಗಿನಂತಿದೆ.
Advertisement
Advertisement
Advertisement
ಡಿಸೈನರ್ ಗೋಲ್ಡ್ ಸ್ಟಡ್ ನೋಸ್ ಪಿನ್: ಕೆಲವು ಸಾಮಾನ್ಯ ಮೂಗುತಿಗಳಲ್ಲಿ ಡಿಸೈನರ್ ಸ್ಟಡ್ ಮೂಗುಬೊಟ್ಟು ಕೂಡ ಒಂದು. ಸ್ಟಡ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೂ ಸೂಟ್ ಆಗುತ್ತದೆ. ಇದು ನೋಡಲು ದುಂಡಾಗಿದ್ದು, ಹಾರ್ಟ್ ಶೇಪ್‍ನಲ್ಲಿರುತ್ತದೆ.
ವಜ್ರದ ಡಿಸೈನ್ ಹೊಂದಿರುವ ಚಿನ್ನದ ಮೂಗುತಿ: ಈ ಮೂಗುತಿ ಸ್ವಲ್ಪ ದುಬಾರಿಯಾಗಿರುತ್ತದೆ. ಇದು ನೋಡಲು ಟ್ರೆಂಡಿಯಾಗಿದ್ದು, ನಿಮಗೆ ಮತ್ತಷ್ಟು ಬ್ಯೂಟಿಫುಲ್ ಲುಕ್ ನೀಡುತ್ತದೆ. ಈ ಮೂಗುಬೊಟ್ಟಿನಲ್ಲಿ ಚಿನ್ನದ ಜೊತೆಗೆ ವಜ್ರವನ್ನು ಹೊಂದಿಸಲಾಗಿದೆ.
ಡಿಸೈನರ್ ಸ್ಟಡ್ ಡೈಮಂಡ್ ನೋಸ್ ಪಿನ್: ಇದು ಡೈಮೆಂಡ್‍ನಿಂದ ವಿನ್ಯಾಸಗೊಳಿಸಿದ ಮೂಗುಬೊಟ್ಟಾಗಿದೆ. ಪಲ್ಸ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೆ ಸೂಟ್ ಆಗುತ್ತದೆ. ನಿಮಗೆ ಯಾವ ರೀತಿಯ ಮೂಗುಬೊಟ್ಟು ಧರಿಸಬೇಕು ಎಂಬ ಅನುಮಾನ ಇದ್ದರೆ, ಈ ಮೂಗುಬೊಟ್ಟನ್ನು ಖರೀದಿಸಬಹುದು.
ವೈಡೂರ್ಯದ ಸ್ಟಡ್ ನೋಸ್ ಪಿನ್: ಇದೊಂದು ಕ್ಲಾಸಿ ಲುಕ್ ನೀಡುವ ಮೂಗುಬೊಟ್ಟಾಗಿದ್ದು, ಅನೇಕ ರತ್ನದ ಕಲ್ಲುಗಳನ್ನು ಬಳಸಿ ಈ ಮೂಗುಬೊಟ್ಟನ್ನು ತಯಾರಿಸಲಾಗಿದೆ. ಈ ಮೂಗುತಿ ಹದಿಹರೆಯದ ಹುಡುಗಿರ ಮೆಚ್ಚಿನ ಡಿಸೈನ್ ಆಗಿದ್ದು, ಬೋಲ್ಡ್ ಲುಕ್ ನೀಡುತ್ತದೆ.
ಮುತ್ತಿನ ಮೂಗುಬೊಟ್ಟು: ಮಹಿಳೆಯರಿಗೆ ಮುತ್ತಿನ ಮೂಗುಬೊಟ್ಟು ಎಂದರೆ ಬಹಳ ಇಷ್ಟ. ನೀವು ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದರೆ, ಚಿನ್ನ ಹಾಗೂ ಬೆಳ್ಳಿಯ ಮೂಗುತಿ ಬೇಡವಾದರೆ ಈ ಮುತ್ತಿನ ಮೂಗುತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.