ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

ಮಾಸ್ಕೋ: ದುಬೈನಲ್ಲಿರುವ ವಿಶ್ವದ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ರೂಪದರ್ಶಿಯೊಬ್ಬಳು ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

23 ವರ್ಷದ ವಿಕಿ ಒಡಿಂಕ್ಟೊವಾ ಎಂಬ ರಷ್ಯಾ ರೂಪದರ್ಶಿ ದುಬೈನಲ್ಲಿರುವ ಸುಮಾರು 1,004 ಅಡಿ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಈ ಫೋಟೋ ಶೂಟ್ ಮಾಡಿಕೊಂಡಿದ್ದಾಳೆ. ಮಾತ್ರವಲ್ಲದೇ ಬಳಿಕ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್  ವೀಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಆದ್ರೆ ಇದೀಗ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ, `ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರತೀ ಬಾರಿ ಈ ವಿಡಿಯೋ ನೋಡುವಾಗ್ಲೂ ನನ್ನ ಮೈ ಬೆವರುತ್ತದೆ ಅಂತಾ ಹೇಳಿಕೊಂಡಿದ್ದಾಳೆ.

ಈಕೆಯ ಫಾಲೋವರ್ಸ್‍ಗಳಲ್ಲಿ ಹಲವು ಮಂದಿ `ಈಕೆ ಯಾವುದೇ ಸುರಕ್ಷತಾ ವಿಧಾನಗಳನ್ನು ಬಳಸದೆ ಫೋಟೋ, ವಿಡಿಯೋ ಮಾಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, `ಒಂದು ವೇಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಆಕೆ ಬದುಕಲು ಸಾಧ್ಯವೇ ಇಲ್ಲ’ ಅಂತಾ ಮಾತನಾಡಿಕೊಂಡಿದ್ದಾರೆ.

ಮಾಡೆಲ್ ಫೋಟೋಗೆ ಕಮೆಂಟ್ ಹಾಕಿದ್ದರಲ್ಲಿ ಒಂದು ಕಮೆಂಟ್ ಹೀಗಿತ್ತು. `ನಿನ್ನ ಜೀವನವನ್ನು ಯಾಕೆ ಈ ರೀತಿ ನಿರ್ಲಕ್ಷ್ಯಿಸುತ್ತಿದ್ದಿ? ಒಂದು ವೇಳೆ ನಾನು ನಿನ್ನ ಪೋಷಕನಾಗಿದ್ದರೆ ನಿನ್ನನ್ನು ಹಾಗೂ ಪೋಟೋ ತೆಗೆದ ಗಡ್ಡಧಾರಿ ವ್ಯಕ್ತಿಯನ್ನು ಶಿಕ್ಷಿಸುತ್ತಿದ್ದೆ’ ಅಂತಾ ಬರೆಯಲಾಗಿತ್ತು.

ಈಕೆಗೆ ಇನ್ ಸ್ಟಾಗ್ರಾಮ್  ನಲ್ಲಿ 30 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ಈಕೆ ಪೋಸ್ಟ್ ಮಾಡಿದ ಕೂಡಲೇ ಫೋಟೋ, ವಿಡಿಯೋ ವೈರಲಾಗಿ ಹರಡಿದೆ.

 

You might also like More from author

Leave A Reply

Your email address will not be published.

badge