Thursday, 20th July 2017

Recent News

5 days ago

ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ

ರಾಯಚೂರು: 2010 ನವೆಂಬರ್ 10 ರಂದು ಕೌಟುಂಬಿಕ ಕಲಹ ಹಿನ್ನೆಯಲ್ಲಿ ಪತಿಯನ್ನೇ ಕೊಂದಿದ್ದ ಪತ್ನಿ ಸೇರಿ ನಾಲ್ಕು ಜನರಿಗೆ ರಾಯಚೂರಿನ ಒಂದನೇ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 25 ಸಾವಿರ ರೂ. ದಂಡ ಹಾಕಿ ಕೋರ್ಟ್ ಆದೇಶಿಸಿದೆ. ರಾಯಚೂರಿನ ಮಂಗಳವಾರಪೇಟೆ ನಿವಾಸಿ ಶ್ರೀನಿವಾಸ್ (36) ಎಂಬಾತನ ಯರಮರಸ್ ಬೈಪಾಸ್ ಬಳಿ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೃತನ ಪತ್ನಿ ಮಹಾದೇವಿ, ಮಾವ ಬಸಪ್ಪ, ಅಳಿಯ […]

1 week ago

ಗ್ರಾಮದಲ್ಲಿ ಬಸ್ ನಿಲ್ಲಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಚಾಲಕನಿಗೆ ಥಳಿತ

ರಾಯಚೂರು: ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಾರಿಗೆ ಬಸ್ ತಡೆದು ಪ್ರತಿಭಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಹೊಸಳ್ಳಿ ಕ್ಯಾಂಪ್‍ನಲ್ಲಿ ನಡೆದಿದೆ. ಸಿಂಧನೂರಿನಿಂದ 5 ಕಿ.ಮೀ ದೂರದಲ್ಲಿರುವ ಹೊಸಳ್ಳಿ ಕ್ಯಾಂಪ್‍ನಲ್ಲಿ ಸಾಮಾನ್ಯ ಬಸ್‍ಗಳನ್ನೂ ಸಹ ನಿಲ್ಲಿಸಲ್ಲ. ನಿಲ್ಲಿಸಿದರೂ ಪಾಸ್ ಇರುವ ವಿದ್ಯಾರ್ಥಿಗಳನ್ನು ಬಸ್ ಹತ್ತಲು ಚಾಲಕ ಹಾಗೂ ನಿರ್ವಾಹಕರು ಬಿಡುತ್ತಿರಲಿಲ್ಲ....

ಮುಪ್ಪಿನ ಕಾಲದಲ್ಲಿ ಈ ಬಡಜೀವಗಳಿಗೆ ಬೇಕಿದೆ ಒಂದು ಪುಟ್ಟ ಮನೆಯ ಆಸರೆ

2 weeks ago

ರಾಯಚೂರು: ಮುಪ್ಪಾದ ಕಾಲಕ್ಕೆ ಮಕ್ಕಳು ಇರದಿದ್ದರೂ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ ರಾಯಚೂರಿನ ಈ ಇಬ್ಬರು ಅಜ್ಜಿಯರು ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದಾರೆ....

ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

2 weeks ago

ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಅಪರಿಚಿತ ಅಜ್ಜಿಯೊಬ್ಬರ ಶವ ಗಬ್ಬು ನಾರುತ್ತಿದ್ದರೂ ಶುಕ್ರವಾರದಿಂದ ಹಾಸಿಗೆ ಮೇಲೆಯೇ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧೆ 15 ದಿನಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶುಕ್ರವಾರ ಮಧ್ಯಾಹ್ನ...

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ- ನಾಯಿಗಳ ದಾಳಿಗೆ 35 ಕುರಿಮರಿಗಳ ಸಾವು

2 weeks ago

ರಾಯಚೂರು: ನಾಯಿಗಳ ದಾಳಿಯಿಂದ 35 ಕುರಿಮರಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರು ತಾಲೂಕಿನ ಐಜಾಪುರ ಗ್ರಾಮದಲ್ಲಿ ನಡೆದಿದೆ. ಹೊಲದ ದೊಡ್ಡಿಯಲ್ಲಿದ್ದ ಕುರಿ ಮರಿಗಳ ಮೇಲೆ ಐದು ನಾಯಿಗಳು ದಾಳಿ ಮಾಡಿ ಕಚ್ಚಿ ಸಾಯಿಸಿವೆ. ರಾಮಪ್ಪ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಇವು...

ಎತ್ತುಗಳ ಬಾಡಿಗೆಗೆ ಹಣವಿಲ್ದೆ ಹೆಗಲ ಮೇಲೆ ನೊಗ ಹೊತ್ತು ಉಳುಮೆ ಮಾಡಿದ ರೈತರು

2 weeks ago

ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಿದ ಬರಗಾಲದ ಪರಿಣಾಮ ಎಷ್ಟು ಘೋರವಾಗಿದೆ ಅಂದ್ರೆ ಈಗ ಮಳೆ ಬಂದರೂ ಹೊಲದಲ್ಲಿ ಬಿತ್ತನೆ ಮಾಡಲು ರೈತರಲ್ಲಿ ಹಣವಿಲ್ಲ. ಸಿಂಧನೂರು ತಾಲೂಕಿನ 4ನೇ ಮೈಲ್ ಕ್ಯಾಂಪ್‍ನಲ್ಲಿ ರೈತರು ಎತ್ತುಗಳ ಬಾಡಿಗೆ ಕೊಡಲು ಹಣವಿಲ್ಲದೆ ಸ್ವತಃ...

ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

2 weeks ago

ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.   ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ...

ನೋಟ್ ಬ್ಯಾನ್ ಎಫೆಕ್ಟ್: ರಾಯಚೂರು ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿ ಇನ್ನೂ ಹಣದ ಕೊರತೆ

2 weeks ago

ರಾಯಚೂರು: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1 ಸಾವಿರ ರೂಪಾಯಿ ನೋಟುಗಳ ಅಮೌಲ್ಯೀಕರಣ ಮಾಡಿ 8 ತಿಂಗಳು ಕಳೆದ್ರೂ ಅದರ ಎಫೆಕ್ಟ್ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಇನ್ನೂ ಮುಂದುವರೆದಿದೆ. ಬ್ಯಾಂಕ್‍ನಲ್ಲಿ ಹಣ ಸಿಗದೆ ಮೂರ್ನಾಲ್ಕು ದಿನಗಳ ಕಾಲ ಜನ ಬ್ಯಾಂಕ್...